ಜಮ್ಮು-ಕಾಶ್ಮೀರ ಚುನಾವಣೆ | ಜನತೆಯ ತೀರ್ಪನ್ನು ಸ್ವೀಕರಿಸಿದ್ದೇನೆ : ಸೋಲನ್ನೊಪ್ಪಿಕೊಂಡ ಇಲ್ತಿಜಾ ಮುಫ್ತಿ

Update: 2024-10-08 13:53 GMT

 ಇಲ್ತಿಜಾ ಮುಫ್ತಿ | PC : PTI  

ಶ್ರೀನಗರ : ದಕ್ಷಿಣ ಕಾಶ್ಮೀರದ ಪ್ರತಿಷ್ಠಿತ ಶ್ರೀಗುಫ್ವಾರಾ-ಬಿಜ್‌ಬೆಹರಾ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬ್ ಮುಫ್ತಿಯವರ ಪುತ್ರಿ ಇಲ್ತಿಜಾ ಮುಫ್ತಿ ಸೋಲನ್ನೊಪ್ಪಿಕೊಂಡಿದ್ದಾರೆ. ಜನತೆಯ ತೀರ್ಪನ್ನು ತಾನು ಸ್ವೀಕರಿಸಿರುವುದಾಗಿ ಅವರು ಹೇಳಿದ್ದಾರೆ.

ಇಲ್ತಿಜಾ ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಬಶೀರ್ ಅಹ್ಮದ್ ವೀರಿ ಅವರಿಂದ 9,770 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಬಿಜೆಪಿಯ ಸೋಫಿ ಯೂಸುಫ್ ಮೂರನೇ ಸ್ಥಾನದಲ್ಲಿದ್ದಾರೆ.

37ರ ಹರೆಯದ ಇಲ್ತಿಜಾ ಎಕ್ಸ್ ಪೋಸ್ಟ್‌ನಲ್ಲಿ, ತನ್ನ ಪರವಾಗಿ ಕಠಿಣವಾಗಿ ಶ್ರಮಿಸಿದ್ದ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಕಳೆದ ಕೆಲವು ದಶಕಗಳಿಂದ ಪಿಡಿಪಿಯ ಭದ್ರಕೋಟೆಯಾಗಿದ್ದ ಶ್ರೀಗುಫ್ವಾರಾ-ಬಿಜ್‌ಬೆಹರಾದಲ್ಲಿ ಸೆ.18ರಂದು ಮೊದಲ ಹಂತದಲ್ಲಿ ಮತದಾನ ನಡೆದಿತ್ತು. ಶೇ.60.43ರಷ್ಟು ಮತದಾನವಾಗಿತ್ತು.

2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಪಿಡಿಪಿಯ ಅಬ್ದುಲ್ ರೆಹಮಾನ್ ಭಟ್ ಅವರು ವೀರಿಯವರನ್ನು ಸೋಲಿಸಿದ್ದರು.

ಪಿಡಿಪಿ ತನ್ನ ಗೆಲುವಿಗೆ ಈ ಕ್ಷೇತ್ರದಲ್ಲಿ ತಾನು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿಕೊಂಡಿತ್ತಾದರೂ, ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಹೆಚ್ಚು ಸಮಯ ವಿನಿಯೋಗಿಸುವಲ್ಲಿ ಇಲ್ತಿಜಾರ ವೈಫಲ್ಯ ಅವರ ಸೋಲಿಗೆ ಕಾರಣಗಳಲ್ಲೊಂದು ಎಂದು ಹೇಳಲಾಗಿದೆ.

ಆದರೆ ನ್ಯಾಷನಲ್ ಕಾನ್ಫರೆನ್ಸ್ ಕಳೆದ ಕೆಲವು ವರ್ಷಗಳಿಂದ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದ್ದು, ವೀರಿ ಇಲ್ಲಿ ಎರಡು ಸಲ ಸೋತಿದ್ದರೂ ಅವರನ್ನೇ ಕಣಕ್ಕಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News