ಜಮ್ಮು ಕಾಶ್ಮೀರದಲ್ಲಿ ಶೇ. 1.48, ಹರ್ಯಾಣದಲ್ಲಿ ಶೇ. 0.38 ನೋಟಾ ಚಲಾವಣೆ

Update: 2024-10-08 15:41 GMT

ಸಾಂದರ್ಭಿಕ ಚಿತ್ರ | PC : PTI 

ಶ್ರೀನಗರ : ಹರ್ಯಾಣಕ್ಕೆ ಹೋಲಿಸಿದರೆ, ಜಮ್ಮು ಹಾಗೂ ಕಾಶ್ಮೀರದಲ್ಲಿ ಹೆಚ್ಚಿನ ಮತದಾರರು ನೋಟಾಕ್ಕೆ ಮತ ಹಾಕಿದ್ದಾರೆ ಎಂಬುದು ಚುನಾವಣಾ ಆಯೋಗದ ದತ್ತಾಂಶದಿಂದ ಬಹಿರಂಗಗೊಂಡಿದೆ.

90 ಸದಸ್ಯರ ಹರ್ಯಾಣ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ 2 ಕೋಟಿಗೂ ಅಧಿಕ ಮತದಾರರಲ್ಲಿ ಶೇ. 67.90 ಮತದಾರರು ಮತ ಚಲಾಯಿಸಿದ್ದಾರೆ. ಇವರಲ್ಲಿ ಶೇ. 0.38 ಮತದಾರರು ನೋಟಾ ಆಯ್ಕೆ ಮಾಡಿದ್ದಾರೆ.

90 ಸ್ಥಾನಗಳ ಜಮ್ಮು ಹಾಗೂ ಕಾಶ್ಮೀರ ವಿಧಾನ ಸಭೆಗೆ 3 ಹಂತಗಳಲ್ಲಿ ಮತದಾನ ನಡೆಯಿತು. ಒಟ್ಟು ಮತದಾರರಲ್ಲಿ ಶೇ. 63.88 ಮತದಾರರು ಮತ ಚಲಾಯಿಸಿದರು. ಇವರಲ್ಲಿ ಶೇ. 1.48 ಮತದಾರರು ನೋಟಾ ಆಯ್ಕೆ ಮಾಡಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News