ಜಾರ್ಖಂಡ್ ಚುನಾವಣೆ |10 ಲಕ್ಷ ಉದ್ಯೋಗ ಸೃಷ್ಟಿ , ಬಡವರಿಗೆ 15 ಲಕ್ಷ ರೂ.ವರೆಗೆ ಆರೋಗ್ಯ ವಿಮೆ : ʼಇಂಡಿಯಾʼ ಭರವಸೆ

Update: 2024-11-05 16:08 GMT

ರಾಂಚಿ : ಯುವಕರಿಗೆ 10 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಬಡವರಿಗೆ 15 ಲಕ್ಷ ರೂ. ವರೆಗೆ ಆರೋಗ್ಯ ವಿಮೆಯ ಭರವಸೆಗಳನ್ನು ಮಂಗಳವಾರ ಬಿಡುಗಡೆಯಾಗಿರುವ ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಏಳು ಗ್ಯಾರಂಟಿಗಳನ್ನು ಒಳಗೊಂಡಿರುವ ಇಂಡಿಯಾ ಮೈತ್ರಿಕೂಟ ಪ್ರಣಾಳಿಕೆಯಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕ್ರಮವಾಗಿ ಶೇ. 26, ಶೇ. 10 ಹಾಗೂ ಶೇ. 14ರಿಂದ ಶೇ. 28, ಶೇ. 12 ಹಾಗೂ ಶೇ. 27ಕ್ಕೆ ಏರಿಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಬಲಪಡಿಸಲಾಗುವುದು ಎಂದೂ ಭರವಸೆ ನೀಡಲಾಗಿದೆ.

ಉಚಿತವಾಗಿ ಹಂಚಿಕೆ ಮಾಡಲಾಗುವ ಪಡಿತರವನ್ನು 5 ಕೆಜಿಯಿಂದ 7 ಕೆಜಿಗೆ ಏರಿಕೆ ಮಾಡುವ ಹಾಗೂ ಅಡುಗೆ ಅನಿಲ ಸಿಲಿಂಡರ್ ಅನ್ನು ಜಾರ್ಖಂಡ್ ನಲ್ಲಿ 450 ರೂ. ಗೆ ಒದಗಿಸುವ ಭರವಸೆಯನ್ನೂ ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆ ಹೊಂದಿದೆ.

“ಯುವಕರಿಗೆ 10 ಲಕ್ಷ ಉದ್ಯೋಗ ಹಾಗೂ ಬಡವರಿಗೆ 15 ಲಕ್ಷ ರೂ. ವರೆಗೆ ಆರೋಗ್ಯ ವಿಮೆಯನ್ನು ಇಂಡಿಯಾ ಮೈತ್ರಿಕೂಟ ಖಾತರಿಪಡಿಸಲಿದೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಆರ್ಜೆಡಿಯ ಜೆ.ಪಿ.ಯಾದವ್ ಬಿಡುಗಡೆ ಮಾಡಿರುವ ಜಂಟಿ ಪ್ರಕಟಣೆಯಲ್ಲಿ ಭರವಸೆ ನೀಡಲಾಗಿದೆ.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಹಾಗೂ ನವೆಂಬರ್ 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News