ಮೋದಿ ಭೇಟಿಯಾದ ಕೇರಳ ಸಿಎಂ : ವಯನಾಡ್ ಪುನರ್ವಸತಿ ಬಗ್ಗೆ ಚರ್ಚೆ

Update: 2024-08-27 15:35 GMT

(Photo/KeralaCMO)

ಹೊಸದಿಲ್ಲಿ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ವಯನಾಡ್ ಪುನರ್ವಸತಿ ಕುರಿತು ಚರ್ಚಿಸಿದ್ದಾರೆ.

ಕೇಂದ್ರವು ಕೋರಿದ್ದ ಹೆಚ್ಚುವರಿ, ವಿವರವಾದ ಜ್ಞಾಪಕ ಪತ್ರವನ್ನೂ ರಾಜ್ಯ ಸರಕಾರವು ಸಲ್ಲಿಸಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಜು.30ರಂದು ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತಗಳಲ್ಲಿ 300ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರು ಈಗಲೂ ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಮೂರು ಗ್ರಾಮಗಳು ಸಂಪೂರ್ಣವಾಗಿ ನಾಮಾವಶೇಷಗೊಂಡಿವೆ.

ಅಂತರರಾಷ್ಟ್ರೀಯ ಸಂಶೋಧಕರ ಗುಂಪು ವರ್ಲ್ಡ್ ವೆದರ್ ಆ್ಯಟ್ರಿಬ್ಯೂಷನ್‌ನ ಅಧ್ಯಯನ ವರದಿಯು ಜು.30ರಂದು ನಸುಕಿನಲ್ಲಿ ಭೂಕುಸಿತಗಳಿಗೆ ಕಾರಣವಾಗಿದ್ದ ಅತಿವೃಷ್ಟಿಯು ‘50 ವರ್ಷಗಳಿಗೊಮ್ಮೆ ನಡೆಯುವ ’ಘಟನೆಯಾಗಿತ್ತು ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News