ಕಳಮಶ್ಶೇರಿ ಸ್ಫೋಟ ಪ್ರಕರಣ: ಆರೋಪಿ ಡೊಮಿನಿಕ್ ಮಾರ್ಟಿನ್ ವಿರುದ್ಧದ UAPA ಪ್ರಕರಣ ಹಿಂಪಡೆದ ಕೇರಳ ಸರ್ಕಾರ

Update: 2024-10-28 07:39 GMT

Photo credit: PTI/Facebook

ಕೊಚ್ಚಿ: ಕಳೆದ ವರ್ಷ ಕೊಚ್ಚಿ ಕಳಮಶ್ಶೇರಿ ಜಮ್ರಾ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಡೊಮಿನಿಕ್ ಮಾರ್ಟಿನ್ ವಿರುದ್ಧದ ಯುಎಪಿಎ(UAPA)ಪ್ರಕರಣವನ್ನು ಕೇರಳ ಸರಕಾರ ಹಿಂಪಡೆದಿದೆ.

2023ರ ಅಕ್ಟೋಬರ್ 29ರಂದು ಯೆಹೋವನ ಸಾಕ್ಷಿಗಳ ಪ್ರಾರ್ಥನೆ ನಡೆಯುವ ಸಂದರ್ಭದಲ್ಲಿ ಜಮ್ರಾ ಕನ್ವೆನ್ಷನ್ ಸೆಂಟರ್ ನಲ್ಲಿ ಸ್ಪೋಟ ಸಂಭವಿಸಿತ್ತು. ಸ್ಪೋಟದಲ್ಲಿ ಆರು ಜೀವಗಳು ಬಲಿಯಾಗಿದ್ದವು.

ಕೇರಳ ಸರ್ಕಾರ ಮತ್ತು UAPA ಪರಿಶೀಲನಾ ಸಮಿತಿಯ ಸಭೆಯ ನಂತರ ಮಾರ್ಟಿನ್ ವಿರುದ್ಧದ UAPA ಆರೋಪಗಳನ್ನು ಹಿಂಪಡೆಯಲಾಗಿದೆ. ಈ ಹಿಂದೆ ಪಂತೀರಂಕಾವು ಮಾವೋವಾದಿ ಪ್ರಕರಣದಲ್ಲಿ ಯುಎಪಿಎ ಬಳಕೆಯ ವಿರುದ್ಧ ಕಳವಳ ವ್ಯಕ್ತವಾಗಿತ್ತು. ಇದೀಗ ಕಳಮಶ್ಶೇರಿ ಪ್ರಕರಣದಲ್ಲಿ ಯುಎಪಿಎ ಆರೋಪಗಳನ್ನು ಹಿಂಪಡೆಯಲು ಕೇರಳ ಸರ್ಕಾರ ನಿರ್ಧರಿಸಿದೆ.

ಅಕ್ಟೋಬರ್ 29ರಂದು ಕೊಚ್ಚಿಯ ಜಮ್ರಾ ಕನ್ವೆನ್ಷನ್ ಸೆಂಟರ್ ನಲ್ಲಿ ಯೆಹೋವನ ಸಾಕ್ಷಿಗಳ ಸಮಾವೇಶ ನಡೆಯುತ್ತಿದ್ದಾಗ ಬೆಳಿಗ್ಗೆ 9:40ಕ್ಕೆ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ 6 ಮಂದಿ ಮೃತಪಟ್ಟು, 23 ಜನರು ಗಾಯಗೊಂಡಿದ್ದರು. ಗಾಯಾಳುಗಳನ್ನು ಕಳಮಶ್ಶೇರಿ ವೈದ್ಯಕೀಯ ಕಾಲೇಜು ಮತ್ತು ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News