ಕೇರಳದಲ್ಲಿ ಹೊಸದಾಗಿ 128 ಕೋವಿಡ್ ಪ್ರಕರಣಗಳು: ಒಂದು ಸಾವು ದಾಖಲು

Update: 2023-12-24 14:22 GMT

Photo : PTI 

ತಿರುವನಂತಪುರ: ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 128 ಹೊಸ ಕೋವಿಡ್ ಪ್ರಕರಣಗಳು ಮತ್ತು ಸೋಂಕಿನಿಂದಾಗಿ ಒಂದು ಸಾವು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರವಿವಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.

ರವಿವಾರ ಬೆಳಿಗ್ಗೆ ಎಂಟು ಗಂಟೆಯವರೆಗೆ ದೇಶಾದ್ಯಂತ ವರದಿಯಾಗಿರುವ 334 ಸಕ್ರಿಯ ಕೋರೊನವೈರಸ್ ಸೋಂಕು ಪ್ರಕರಣಗಳಲ್ಲಿ 128 ಪ್ರಕರಣಗಳು ಕೇರಳವೊಂದರಲ್ಲೇ ದಾಖಲಾಗಿವೆ,ಇದರೊಂದಿಗೆ ರಾಜ್ಯದಲ್ಲಿಯ ಸಕ್ರಿಯ ಪ್ರಕರಣಗಳ ಸಂಖ್ಯೆ 3,000ಕ್ಕೆ ಏರಿಕೆಯಾಗಿದೆ ಎಂದು ಅದು ತಿಳಿಸಿದೆ.

ರಾಜ್ಯದಲ್ಲಿ ಒಂದು ಸಾವು ವರದಿಯಾಗುವುದರೊಂದಿಗೆ ಮೂರು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕವು ಭುಗಿಲೆದ್ದ ಬಳಿಕ ಕೇರಳದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 72,063ಕ್ಕೇರಿದೆ.

ಸೋಂಕು ಪತ್ತೆಯಾದ ಬಳಿಕ ಕಳೆದ 24 ಗಂಟೆಗಳಲ್ಲಿ 296 ರೋಗಿಗಳು ಗುಣಮುಖಗೊಂಡಿದ್ದಾರೆ,ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಅಥವಾ ಸ್ಥಳಾಂತರಗೊಂಡಿದ್ದಾರೆ. ಇದರೊಂದಿಗೆ ಈವರೆಗೆ ಇಂತಹ ಪ್ರಕರಣಗಳ ಸಂಖ್ಯೆ 68,38,282ಕ್ಕೇರಿದೆ.

ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ ಆತಂಕ ಪಡಬೇಕಾದ ಕಾರಣವಿಲ್ಲ ಎಂದು ಮಂಗಳವಾರ ರಾಜ್ಯದ ಜನತೆಗೆ ಭರವಸೆ ನೀಡಿದ್ದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೋವಿಡ್ ಸೋಂಕನ್ನು ಎದುರಿಸಲು ಆಸ್ಪತ್ರೆಗಳು ಸನ್ನದ್ಧವಾಗಿವೆ ಎಂದು ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News