ಕುವೈತ್ ಅಗ್ನಿ ದುರಂತ: ಕೇರಳ ತಲುಪಿದ 45 ಮಂದಿ ಭಾರತೀಯರ ಪಾರ್ಥಿವ ಶರೀರ

Update: 2024-06-14 06:26 GMT

PC : NDTV 

ಹೊಸದಿಲ್ಲಿ: ಎರಡು ದಿನಗಳ ಹಿಂದೆ ಕುವೈತ್‌ನಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ 45 ಮಂದಿ ಭಾರತೀಯರ ಮೃತದೇಹಗಳನ್ನು ಹೊತ್ತು ತಂದಿರುವ ವಿಶೇಷ ವಾಯುಪಡೆ ವಿಮಾನವು ಕೇರಳಕ್ಕೆ ಬಂದಿಳಿದಿದೆ. ಬಳಿಕ ಆ ವಿಮಾನವು ದಿಲ್ಲಿಗೆ ತೆರಳಲಿದೆ ಎಂದು ವರದಿಯಾಗಿದೆ.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಿಗೇ ಕುವೈತ್‌ಗೆ ದೌಡಾಯಿಸಿದ್ದ ಗೊಂಡಾ ಸಂಸದ ಕೀರ್ತಿ ವರ್ಧನ್ ಸಿಂಗ್ ಅವರು ಮೃತದೇಹಗಳನ್ನು ಹೊತ್ತು ತರುತ್ತಿರುವ ವಾಯುಪಡೆ ವಿಮಾನದಲ್ಲಿ ಮರಳುತ್ತಿದ್ದಾರೆ ಎಂದು ಇಂದು ಬೆಳಗ್ಗೆ ಭಾರತೀಯ ರಾಜತಾಂತ್ರಿಕರೊಬ್ಬರು ತಿಳಿಸಿದ್ದರು.

ಬುಧವಾರ ಕುವೈತ್‌ನ ಮಂಗಾಫ್ ನಗರದ ಆರು ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿಯಲ್ಲಿ ಸಿಲುಕಿ ಕನಿಷ್ಠ ಪಕ್ಷ 48 ಮಂದಿ ಮೃತಪಟ್ಟಿದ್ದರು. ಈ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದ 176 ಮಂದಿ ಭಾರತೀಯರ ಪೈಕಿ 45 ಮಂದಿ ಮೃತಪಟ್ಟಿದ್ದು, 33 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News