ವೈವಾಹಿಕ ಅತ್ಯಾಚಾರ ಅರ್ಜಿಗಳು: ʼನನಗೆ ತೀರ್ಪು ನೀಡಲು ಅಸಾಧ್ಯʼ ಎಂದು ವಿಚಾರಣೆ ಮುಂದೂಡಿದ ಸಿಜೆಐ

Update: 2024-10-23 08:42 GMT

ಸಿಜೆಐ ಡಿ ವೈ ಚಂದ್ರಚೂಡ್ (Photo: PTI)

ಹೊಸದಿಲ್ಲಿ: ವೈವಾಹಿಕ ಅತ್ಯಾಚಾರ (ಸಂಗಾತಿಯ ಮೇಲಿನ ಅತ್ಯಾಚಾರ) ಪ್ರಕರಣದ ಕುರಿತ ಅರ್ಜಿಗಳ ವಿಚಾರಣೆಯನ್ನು ಸಿಜೆಐ ಡಿ ವೈ ಚಂದ್ರಚೂಡ್ ಅವರು ಮುಂದೂಡಿದ್ದು, ನನಗೆ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಮತ್ತು ತೀರ್ಪು ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಸಿಜೆಐ ಡಿ.ವೈ. ಚಂದ್ರಚೂಡ್ ನ.10 ರಂದು ನಿವೃತ್ತರಾಗಲಿದ್ದಾರೆ. ಆದ್ದರಿಂದ ಎಲ್ಲಾ ವಕೀಲರಿಗೆ ಈ ವಿಷಯದಲ್ಲಿ ವಾದ ಮಂಡಿಸಲು ಸಮಯಾವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಐಪಿಸಿಯ ಸೆಕ್ಷನ್ 375ರ ವಿನಾಯಿತಿ ಷರತ್ತಿನ ಅಡಿಯಲ್ಲಿ ಪುರುಷನು ತನ್ನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ, ಪತ್ನಿಯು ಅಪ್ರಾಪ್ತಳಲ್ಲ ಎಂದರೆ ಅತ್ಯಾಚಾರವಲ್ಲ ಎಂದು ಹೇಳುತ್ತದೆ.

ಈ ನಿಬಂಧನೆಗಳ ಅಡಿಯಲ್ಲಿ ಪತಿಗೆ ವಿನಾಯಿತಿ ನೀಡುವುದರ ವಿರುದ್ಧದ ಅರ್ಜಿಗಳನ್ನು 4 ವಾರಗಳ ನಂತರ ವಿಚಾರಣೆಗೆ ಸುಪ್ರೀಂಕೋರ್ಟ್ ನಿಗದಿಪಡಿಸಿದೆ. ಸಿಜೆಐ ನಿವೃತ್ತಿ ಹಿನ್ನೆಲೆ ಇನ್ನೊಂದು ಪೀಠ ಈ ಕುರಿತು ವಿಚಾರಣೆ ನಡೆಸಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News