ವಯನಾಡ್ ನ ಮುಂಡಕ್ಕೈನಲ್ಲಿ ಮತ್ತೆ ಭೂಕುಸಿತ; ರಕ್ಷಣಾ ಕಾರ್ಯಾಚರಣೆಗೆ ಅಡಚಣೆ

Update: 2024-07-30 09:09 GMT

Photo: PTI

ವಯನಾಡ್: ವಯನಾಡ್ ನ ಮುಂಡಕ್ಕೈನಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಟಚಣೆ ಉಂಟಾಗಿದೆ ಎಂದು thenewsminute.com ವರದಿ ಮಾಡಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ತೀವ್ರ ತೊಡಕುಂಟಾಗಿದ್ದು, ಈ ನಡುವೆಯೇ ಮತ್ತೊಂದು ಭೂಕುಸಿತ ಸಂಭವಿಸಿರುವುದರಿಂದ ಮುಂಡಕ್ಕೈನಲ್ಲಿ ಆತಂಕ ಮನೆ ಮಾಡಿದೆ.

ಇತ್ತೀಚಿನ ವರದಿಗಳ ಪ್ರಕಾರ, ವಯನಾಡ್ ನಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ಈವರೆಗೆ 60 ಮಂದಿಯ ಮೃತದೇಹ ಪತ್ತೆಯಾಗಿದೆ. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ.

ಈ ನಡುವೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪುನರ್ವಸತಿ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ರೂ. 5 ಕೋಟಿ ಪರಿಹಾರ ಘೋಷಿಸಿದ್ದಾರೆ. ಇದರೊಂದಿಗೆ ವೈದ್ಯರ ತಂಡವೊಂದೂ ಕೇರಳಕ್ಕೆ ತೆರಳಲಿದ್ದು, ಈ ತಂಡದಲ್ಲಿ ವೈದ್ಯರು, ಶುಶ್ರೂಷಕರೊಂದಿಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿಗಳಿರಲಿದ್ದಾರೆ. ಇವರೊಂದಿಗೆ ಐಎಎಸ್ ಅಧಿಕಾರಿಗಳ ಎರಡು ತಂಡ ಕೂಡಾ ಕೇರಳಕ್ಕೆ ತೆರಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News