ಹಿಂಸೆಯನ್ನು ಬಿಂಬಿಸುವ ವೀಡಿಯೋ, ಫೋಟೋ ಪೋಸ್ಟ್‌ ಮಾಡುವುದನ್ನು ನಿಷೇಧಿಸಿದ ಮಣಿಪುರ ಸರ್ಕಾರ

Update: 2023-10-12 09:15 GMT

Photo: PTI

ಇಂಫಾಲ್‌ : ಮಣಿಪುರದಲ್ಲಿ ಜನಾಂಗೀಯ ಸಂಘರ್ಷಗಳು ಮುಂದುವರಿದಿರುವಂತೆ ರಾಜ್ಯ ಸರ್ಕಾರವು ಹಿಂಸೆಯನ್ನು ಬಿಂಬಿಸುವ ವೀಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವುದನ್ನು ನಿಷೇಧಿಸಿದೆ. ಹಿಂಸೆಯ ಚಿತ್ರಗಳನ್ನು ಪರಿಸ್ಥಿತಿಯನ್ನು ಇನ್ನಷ್ಟು ಪ್ರಚೋದಿಸಲು ಹಾಗೂ ಪ್ರತಿಭಟನಾಕಾರರನ್ನು ಒಟ್ಟು ಸೇರಿಸಲು ಬಳಸಲಾಗುತ್ತಿದೆ, ಇದು ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಸರಕಾರ ಹೇಳಿದೆ.

ತನ್ನ ಆದೇಶವನ್ನು ಮೀರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಇಂತಹ ಚಿತ್ರಗಳು ಅಥವಾ ವೀಡಿಯೋಗಳನ್ನು ಪೋಸ್ಟ್‌ ಮಾಡುವವರ ಕುರಿತು ಮಾಹಿತಿಯಿದ್ದಲ್ಲಿ ಪೊಲೀಸರಿಗೆ ತಿಳಿಸುವಂತೆಯೂ ಸರ್ಕಾರ ಹೇಳಿದೆ.

ರಾಜ್ಯದಲ್ಲಿ ಆಗಾಗ ಅಂತರ್ಜಾಲ ಸಂಪರ್ಕ ಪುನಃಸ್ಥಾಪನೆಯಾದಾಗಲೆಲ್ಲಾ ಸಂಘರ್ಷದ ವೇಳೆ ನಡೆಸಲಾದ ದೌರ್ಜನ್ಯಗಳ ವೀಡಿಯೋಗಳು ಪೋಸ್ಟ್‌ ಮಾಡಲ್ಬಟ್ಟು ಇನ್ನಷ್ಟು ಸಮಸ್ಯೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News