ಮಣಿಪುರ ಹಿಂಸಾಚಾರ: ಕುಕಿ ಉಗ್ರಗಾಮಿ ಗುಂಪಿನ ನಾಯಕನ ಮನೆ ಬೆಂಕಿಗಾಹುತಿ

Update: 2023-07-04 16:22 GMT

Photo : PTI

ಗುವಾಹಟಿ: ಚುರಾಚಂದ್ರಪುರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಕುಕಿ ಉಗ್ರಗಾಮಿ ಗುಂಪಿನ ಹಿರಿಯ ನಾಯಕನೋರ್ವನ ಮನೆಯನ್ನು ಸುಟ್ಟು ಹಾಕಿದ್ದಾರೆ ಎಂದು ಬುಡಕಟ್ಟು ಸಂಘಟನೆ ಇಂಡಿಜಿನಿಯಸ್ ಟ್ರೈಬಲ್ ಲೀಡರ್ಸ್ ಫೋರಮ್ (ITLF)ನ ವಕ್ತಾರರು ಮಂಗಳವಾರ ತಿಳಿಸಿದರು.

ಚುರಾಚಂದ್ರಪುರ ಪಟ್ಟಣದಿಂದ ಸುಮಾರು ಐದು ಕಿ.ಮೀ.ದೂರದಲ್ಲಿರುವ ಸೊಂಗ್ಪಿಯಲ್ಲಿ ಈ ದಾಳಿ ನಡೆದಿದ್ದು, ಯಾರೂ ಗಾಯಗೊಂಡಿಲ್ಲ. ಮನೆಯ ಹೊರಗೆ ನಿಲ್ಲಿಸಿದ್ದ ಕಾರು ಸಂಪೂರ್ಣ ಹಾನಿಗೀಡಾಗಿದೆ.

ಅಪರಿಚಿತ ದುಷ್ಕರ್ಮಿಗಳು ಕಳೆದ ರಾತ್ರಿ ಕುಕಿ ನ್ಯಾಷನಲ್ ಆರ್ಗನೈಸೇಷನ್ (KNO)ನ ವಕ್ತಾರ ಸೀಲೆನ್ ಹಾವಕಿಪ್ ಅವರ ಮನೆಯನ್ನು ಸುಟ್ಟು ಹಾಕಿದ್ದಾರೆ. ಕೆಎನ್ಒ/ಯುನೈಟೆಡ್ ಪೀಪಲ್ಸ್ ಫ್ರಂಟ್(YPF) ರಾಷ್ಟ್ರೀಯ ಹೆದ್ದಾರಿ 2ರಲ್ಲಿ ನಿರ್ಬಂಧವನ್ನು ಹಿಂದೆಗೆದುಕೊಂಡ ಬಳಿಕ ಈ ದಾಳಿ ನಡೆದಿದೆ ಎಂದು ಐಟಿಎಲ್ಎಫ್ ವಕ್ತಾರ ಗಿಂಜಾ ವುಲ್ಝಾಂಗ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News