ಮಸೂದ್ ಪೆಝೆಶ್ಕಿಯಾನ್ ಇರಾನ್‍ನ ಮುಂದಿನ ಅಧ್ಯಕ್ಷ

Update: 2024-07-06 08:25 GMT

PC : aljazeera.com

ಟೆಹರಾನ್: ಇರಾನ್‍ನ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಮತ್ತು ಸಂಸದ ಮಸೂದ್ ಪೆಝೆಶ್ಕಿಯಾನ್ ಅವರು ಅಧ್ಯಕ್ಷೀಯ ಪೈಪೋಟಿಯಲ್ಲಿ ಎದುರಾಳಿ ಸಯೀದ್ ಜಲೀಲಿ ಅವರನ್ನು ಸೋಲಿಸುವ ಮೂಲಕ ಇರಾನ್‍ನ ಮುಂದಿನ ಅಧ್ಯಕ್ಷರಾಗಲಿದ್ದಾರೆ.

ಶುಕ್ರವಾರ ನಡೆದ ಮತಗಳಲ್ಲಿ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಪೆಝೆಶ್ಕಿಯಾನ್ ದೇಶದ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

ಪೆಝೆಶ್ಕಿಯಾನ್ ಅವರು 16.3 ದಶಲಕ್ಷ ಅಥವಾ ಶೇಕಡ 53.7ರಷ್ಟು ಮತಗಳನ್ನು ಪಡೆದಿದ್ದರೆ, ಜಲೀಲಿ 13.5 ದಶಲಕ್ಷ ಅಥವಾ ಶೇಕಡ 44.3ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

"ನಾವು ಎಲ್ಲರತ್ತಲೂ ಸ್ನೇಹಹಸ್ತ ಚಾಚುತ್ತೇವೆ.. ನಾವೆಲ್ಲ ಈ ದೇಶದ ಜನ.. ದೇಶದ ಪ್ರಗತಿಗಾಗಿ ನಾವು ಪ್ರತಿಯೊಬ್ಬರನ್ನೂ ಬಳಸಿಕೊಳ್ಳಬೇಕು" ಎಂದು ಅವರು ಸರ್ಕಾರಿ ಟೆಲಿವಿಷನ್ ಮೂಲಕ ಮಾಡಿದ ಭಾಷಣದಲ್ಲಿ ಸ್ಪಷ್ಟಪಡಿಸಿದರು.

ಜಲೀಲಿ ವಿರುದ್ಧ ಮುನ್ನಡೆ ಹೆಚ್ಚುತ್ತಿದ್ದಂತೆ ಶನಿವಾರ ನಸುಕಿನಲ್ಲೇ ಪೆಝೆಶ್ಕಿಯಾನ್ ಬೆಂಬಗರು ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಕಂಡುಬಂತು ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News