ಐಪಿಎಲ್‌ ನಲ್ಲಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಮ್ಯಾಕ್ಸ್ ವೆಲ್, ರೋಹಿತ್ ದಾಖಲೆ ಮುರಿದ ದಿನೇಶ್ ಕಾರ್ತಿಕ್ ಗೆ ಅಗ್ರಸ್ಥಾನ!

Update: 2024-05-13 16:20 GMT

 ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ | PC: X 

ಹೊಸದಿಲ್ಲಿ: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ರೋಹಿತ್ ಶರ್ಮಾರ ದಾಖಲೆಯನ್ನು ಮುರಿದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರವಿವಾರ ತವರು ಮೈದಾನ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕಾರ್ತಿಕ್ ಖಾತೆ ತೆರೆಯದೆ ಔಟಾದರು. ಈ ಮೂಲಕ ಅವರು ಐಪಿಎಲ್ ಟೂರ್ನಿಯಲ್ಲಿ 232 ಇನಿಂಗ್ಸ್‌ ಗಳಲ್ಲಿ 18 ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಎನಿಸಿಕೊಂಡರು. ಮ್ಯಾಕ್ಸ್ವೆಲ್ 127 ಇನಿಂಗ್ಸ್‌ ಗಳಲ್ಲಿ 17 ಬಾರಿ ಹಾಗೂ ರೋಹಿತ್ ಶರ್ಮಾ 251 ಇನಿಂಗ್ಸ್‌ ಗಳಲ್ಲಿ 17 ಸಲ ಶೂನ್ಯ ಸಂಪಾದಿಸಿದ್ದರು.

ಐಪಿಎಲ್‌ ನಲ್ಲಿ ಹೆಚ್ಚು ಶೂನ್ಯ ಗಳಿಸಿದ ಆಟಗಾರರು

ದಿನೇಶ್ ಕಾರ್ತಿಕ್-18

ಗ್ಲೆನ್ ಮ್ಯಾಕ್ಸ್ವೆಲ್-17

ರೋಹಿತ್ ಶರ್ಮಾ-17

ಪಿಯುಷ್ ಚಾವ್ಲಾ-15

ಮನ್ದೀಪ್ ಸಿಂಗ್-15

ಸುನೀಲ್ ನರೇನ್-15

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News