ದಿಲ್ಲಿ ವಕ್ಫ್ ಬೋರ್ಡ್ ನ ಅಕ್ರಮ ಹಣ ವರ್ಗಾವಣೆ ಪ್ರಕರಣ | AAP ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
Update: 2024-10-29 14:55 GMT
ಹೊಸದಿಲ್ಲಿ : ದಿಲ್ಲಿ ವಕ್ಫ್ ಬೋರ್ಡ್ ನಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಜಾರಿ ನಿರ್ದೇಶನಾಲಯ(ಈಡಿ) ಆರೋಪಪಟ್ಟಿ ಸಲ್ಲಿಸಿದೆ.
110 ಪುಟಗಳ ಚಾರ್ಜ್ ಶೀಟ್ ನಲ್ಲಿ ಮರಿಯಮ್ ಸಿದ್ದೀಕಿ ಎಂಬವರನ್ನು ಕೂಡ ಈಡಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಮರಿಯಮ್ ಸಿದ್ದೀಕಿಯನ್ನು ಪ್ರಕರಣದಲ್ಲಿ ಈವರೆಗೆ ಪೊಲೀಸರು ಬಂಧಿಸಿಲ್ಲ. ನವೆಂಬರ್ 4ರಂದು ನ್ಯಾಯಾಲಯ ಚಾರ್ಜ್ ಶೀಟ್ ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ
ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಸೆಪ್ಟೆಂಬರ್ 2ರಂದು ಅವರ ಓಖ್ಲಾ ನಿವಾಸದಿಂದ ಈಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಸ್ತುತ ಅಮಾನತುಲ್ಲಾ ಖಾನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಅಮಾನತುಲ್ಲಾ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನ.7ಕ್ಕೆ ಮುಂದೂಡಿದ್ದಾರೆ.