2012-2021ರ ಅವಧಿಯಲ್ಲಿ ಪ್ರವಾಹದಿಂದ 17,000ಕ್ಕೂ ಹೆಚ್ಚು ಮಂದಿ ಮೃತ್ಯು

Update: 2023-08-01 14:19 GMT

ಸಾಂದರ್ಭಿಕ ಚಿತ್ರ.| Photo: PTI 

ಹೊಸ ದಿಲ್ಲಿ: ಪ್ರವಾಹದಿಂದಾಗಿ 17,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, 2012-2021ರ ಅವಧಿಯಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಲ ಶಕ್ತಿ ಇಲಾಖೆಯ ರಾಜ್ಯ ಸಚಿವ ಬಿಶ್ವೇಶ್ವರ್ ತುಡು, ನಗರ ಪ್ರದೇಶಗಳಲ್ಲಿನ ಪ್ರವಾಹಕ್ಕೆ ಮುಖ್ಯವಾಗಿ ಕಡಿಮೆ ಅವಧಿಯಲ್ಲಿ ತೀವ್ರ ಪ್ರಮಾಣದ ಮಳೆ ಸುರಿಯುವ ನಿದರ್ಶನಗಳು ಹೆಚ್ಚಳವಾಗುತ್ತಿರುವುದು ಕಾರಣವಾಗಿದ್ದು, ಇದರೊಂದಿಗೆ ಯೋಜನಾರಹಿತ ಬೆಳವಣಿಗೆ, ನೈಸರ್ಗಿಕ ಜಲಮೂಲಗಳ ಅತಿಕ್ರಮಣ ಹಾಗೂ ಕಳಪೆ ಚರಂಡಿ ವ್ಯವಸ್ಥೆಯೂ ಈ ಪ್ರವಾಹಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ತುಡು ಹಂಚಿಕೊಂಡಿರುವ ದತ್ತಾಂಶದ ಪ್ರಕಾರ, ಪ್ರವಾಹದಿಂದ 17,422 ಸಾವುಗಳು ಸಂಭವಿಸಿದ್ದು, 2012-2021ರ ಅವಧಿಯಲ್ಲಿ ಭಾರತದಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ ಎಂದು ಹೇಳಲಾಗಿದೆ.

ಕೇಂದ್ರ ಜಲ ಆಯೋಗ ಸಿದ್ಧಪಡಿಸಿರುವ ಭಾರಿ ಮಳೆ ಹಾಗೂ ಪ್ರವಾಹಗಳಿಂದ ಇಡೀ ರಾಜ್ಯದಲ್ಲಿ ಆಗಿರುವ ಹಾನಿಗಳ ರಾಜ್ಯವಾರು ದತ್ತಾಂಶದ ಪ್ರಕಾರ, ಬೆಳೆಗಳು, ಮನೆಗಳು ಹಾಗೂ ಸಾರ್ವಜನಿಕ ಸೌಲಭ್ಯಗಳಿಗೆ ಆಗಿರುವ ಒಟ್ಟಾರೆ ಹಾನಿಯ ಮೊತ್ತವು ರೂ. 2,76,004.05 ಕೋಟಿ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ನಗರ ಭಾಗದ ಪ್ರವಾಹವನ್ನು ನಿಭಾಯಿಸಲು ಅಂತರ್ಜಲ ವೃದ್ಧಿ ಪ್ರೋತ್ಸಾಹ ಹಾಗೂ ಇನ್ನಿತರ ನೈಸರ್ಗಿಕ ಪರಿಹಾರಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಮ್ಮ ಲಿಖಿತ ಉತ್ತರದಲ್ಲಿ ತುಡು ತಿಳಿಸಿದ್ದಾರೆ.

"ದೇಶದಲ್ಲಿ 185 ಶತಕೋಟಿ ಕ್ಯೂಬಿಕ್ ನೀರನ್ನು ಸಂಗ್ರಹಿಸಲು ಕೇಂದ್ರ ಅಂತರ್ಜಲ ನೀರು ಮಂಡಳಿಯಿಂದ ಕೃತಕ ಅಂತರ್ಜಲ ವೃದ್ಧಿಗಾಗಿ ಸಮಗ್ರ ಯೋಜನೆ-2020 ಅನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಸಿದ್ಧಪಡಿಸಲಾಗಿದ್ದು, ಕೃತಕ ಅಂತರ್ಜಲ ವೃದ್ಧಿ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News