ನಾಶಿಕ್:‌ ಗೋಮಾಂಸ ಸಾಗಾಟ ಶಂಕೆಯಿಂದ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಗುಂಪು

ಗೋಮಾಂಸ ಕಳ್ಳಸಾಗಣಿಗೆ ಮಾಡುತ್ತಿದ್ದಾನೆಂಬ ಶಂಕೆಯಿಂದ ಗುಂಪೊಂದು ವ್ಯಕ್ತಿಯೊಬ್ಬನನ್ನು ಥಳಿಸಿ ಸಾಯಿಸಿದ ಘಟನೆ ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

Update: 2023-06-26 06:07 GMT
Editor : Muad | Byline : ವಾರ್ತಾಭಾರತಿ

ಸಾಂದರ್ಭಿಕ ಚಿತ್ರ: PTI

ಮುಂಬೈ: ಗೋಮಾಂಸ ಕಳ್ಳಸಾಗಣಿಗೆ ಮಾಡುತ್ತಿದ್ದಾನೆಂಬ ಶಂಕೆಯಿಂದ ಗುಂಪೊಂದು ವ್ಯಕ್ತಿಯೊಬ್ಬನನ್ನು ಥಳಿಸಿ ಸಾಯಿಸಿದ ಘಟನೆ ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಮುಂಬೈನ ಕುರ್ಲಾ ನಿವಾಸಿ 32 ವರ್ಷದ ಅಫನ್‌ ಅನ್ಸಾರಿ ತನ್ನ ಸಹವರ್ತಿ ನಾಸಿರ್‌ ಶೇಖ್‌ ಎಂಬಾತನೊಂದಿಗೆ ಮಾಂಸವನ್ನು ಕಾರಿನಲ್ಲಿ ಸಾಗಾಟ ನಡೆಸುತ್ತಿದ್ದಾಗ ಗೋರಕ್ಷಕರೆಂದು ತಿಳಿಯಲಾದ ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿ ಅವರನ್ನು ಥಳಿಸಿದ್ದರು.

ಗಂಭೀರ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಫನ್‌ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ಮತ್ತು ಹಿಂಸೆ ನಡೆಸಿದ ಆರೋಪ ಅವರ ಮೇಲೆ ಹೊರಿಸಲಾಗಿದೆ.

ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ತೀವ್ರ ಹಾನಿಗೊಂಡ ಕಾರಿನೊಳಗೆ ಇಬ್ಬರು ಗಾಯಾಳುಗಳಿರುವುದು ಕಂಡುಬಂದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಅವರಲ್ಲೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News