ರಾಜಕೀಯ ಪಕ್ಷಗಳು ಹಣಕಾಸು ಹೇಳಿಕೆಗಳನ್ನು‌ ಸಲ್ಲಿಸಲು ಚುನಾವಣಾ ಆಯೋಗದಿಂದ ಹೊಸ ಆನ್‌ಲೈನ್ ಪೋರ್ಟಲ್

Update: 2023-07-03 15:35 GMT

Photo: PTI

ಹೊಸದಿಲ್ಲಿ: ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಆನ್ಲೈನ್ ನಲ್ಲಿ ತಮ್ಮ ಹಣಕಾಸು ಲೆಕ್ಕಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಹೊಸ ಪೋರ್ಟಲ್ ಅನ್ನು ಮಂಗಳವಾರ ಆರಂಭಿಸಿದೆ. ಇದು ದೇಣಿಗೆಗಳ ವರದಿಗಳು ಮತ್ತು ಚುನಾವಣಾ ವೆಚ್ಚದ ವಿವರಗಳನ್ನು ಒಳಗೊಂಡಿರುತ್ತದೆ.

‌ಆನ್ಲೈನ್‌ನಲ್ಲಿ ದತ್ತಾಂಶಗಳ ಲಭ್ಯತೆಯು ಅನುಸರಣೆ ಮತ್ತು ಪಾರದರ್ಶಕತೆಯ ಮಟ್ಟವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಆಯೋಗವು ಎಲ್ಲ ರಾಜಕೀಯ ಪಕ್ಷಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಯಾವುದೇ ರಾಜಕೀಯ ಪಕ್ಷವು ಆನ್ಲೈನ್ ನಲ್ಲಿ ವರದಿಗಳನ್ನು ಸಲ್ಲಿಸಲು ಬಯಸದಿದ್ದರೆ ಅದಕ್ಕಾಗಿ ಅದು ಆಯೋಗಕ್ಕೆ ಸಮರ್ಥನೆಯನ್ನು ನೀಡಬೇಕಾಗುತ್ತದೆ ಮತ್ತು ಇದನ್ನು ಮತದಾರರ ತಿಳುವಳಿಕೆಗಾಗಿ ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ಭೌತಿಕ ವರದಿಗಳನ್ನು ಸಲ್ಲಿಸುವಲ್ಲಿ ತೊಂದರೆಗಳನ್ನು ನಿವಾರಿಸುವ ಮತ್ತು ಪ್ರಮಾಣಿತ ನಮೂನೆಯಲ್ಲಿ ಸಕಾಲಿಕ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳುವ ಅವಳಿ ಉದ್ದೇಶಗಳಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆಯೋಗವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News