ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ನಿಕ್ಕಿ ಹ್ಯಾಲೆಗೆ ಮೊದಲ ಜಯ

Update: 2024-03-04 16:52 GMT

ನಿಕ್ಕಿ ಹ್ಯಾಲೆ | Photo: indiatoday.in 

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ರಿಪಬ್ಲಿಕನ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಾಥಮಿಕ ಚುನಾವಣೆಯಲ್ಲಿ ನಿಕ್ಕಿ ಹ್ಯಾಲೆ ಮೊದಲ ಗೆಲುವ ದಾಖಲಿಸಿದ್ದು ವಾಷಿಂಗ್ಟನ್ ಡಿಸಿ ಪ್ರಾಥಮಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಸೋಲಿಸಿದ್ದಾರೆ.

ರಿಪಬ್ಲಿಕನ್ ಅಭ್ಯರ್ಥಿಗಳ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ನಿಕ್ಕಿ ಹ್ಯಾಲೆ ಮುಂಚೂಣಿಯಲ್ಲಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಹ್ಯಾಲೆ 62.9% ಮತ್ತು ಟ್ರಂಪ್ 33.2% ಮತ ಪಡೆದರು. ಇದು ನಿಕ್ಕಿ ಹ್ಯಾಲೆಗೆ ದೊರಕಿರುವ ಏಕೈಕ ಗೆಲುವಾಗಿದ್ದರೆ ಟ್ರಂಪ್ 8 ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಮುಂದೆ ನಡೆಯಲಿರುವ ಪ್ರಾಥಮಿಕ ಚುನಾವಣೆಯಲ್ಲೂ ಮೇಲುಗೈ ಸಾಧಿಸಲಿದ್ದಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News