ಇಮ್ರಾನ್ ಖಾನ್ ಬೆಂಬಲಿಗರಿಗೆ 5 ವರ್ಷ ಜೈಲುಶಿಕ್ಷೆ
Update: 2024-03-31 17:18 GMT
ಲಾಹೋರ್: ಕಳೆದ ವರ್ಷದ ಮೇ 9ರಂದು ದೇಶದ ಸೇನಾಪಡೆಯ ಪ್ರಮುಖ ಕಚೇರಿಗಳ ಮೇಲೆ ನಡೆದ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ 51 ಬೆಂಬಲಿಗರಿಗೆ ಪಾಕಿಸ್ತಾನದ ನ್ಯಾಯಾಲಯ 5 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಬೆಂಬಲಿಗರು ಕಳೆದ ವರ್ಷ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದು ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿ ಹಾಗೂ ಫೈಸಲಾಬಾದ್ನ ಐಎಸ್ಐ ಕಟ್ಟಡ ಸೇರಿದಂತೆ ಹಲವು ಸೇನಾ ಸಂಸ್ಥಾಪನೆಗಳ ಮೇಲೆ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಶಿಕ್ಷೆಗೆ ಒಳಗಾದವರಲ್ಲಿ ಪಿಟಿಐ ಸಂಸದ ಕಲೀಮುಲ್ಲಾ ಖಾನ್ ಕೂಡಾ ಸೇರಿದ್ದಾರೆ ಎಂದು ವರದಿಯಾಗಿದೆ.