ಪ್ಯಾರಿಸ್ 2024 ರ ಒಲಿಂಪಿಕ್ಸ್ | ಮಗಳು ಪದಕ ಗೆಲ್ಲಲು ಪ್ರಧಾನಿ ಮೋದಿಯವರೇ ಕಾರಣ ಎಂದ ಮನು ಭಾಕರ್ ತಂದೆ!
ಹೊಸದಿಲ್ಲಿ : ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಎರಡು ಪದಕ ಗೆಲ್ಲುವ ಮೂಲಕ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಕಾರಣ ಎಂದು ಅವರ ತಂದೆ ರಾಮ್‌ಕೃಷ್ಣ ಭಾಕರ್ ಹೇಳಿದ್ದಾರೆ.
ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಎರಡನೇ ಪದಕವನ್ನು ಗೆದ್ದ ನಂತರ ತಮ್ಮ ಮಗಳೊಂದಿಗೆ ಮಾತನಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನು ಭಾಕರ್ ತಂದೆ ರಾಮ್‌ಕೃಷ್ಣ ಭಾಕರ್ ಧನ್ಯವಾದ ಅರ್ಪಿಸಿದ್ದಾರೆ.
#WATCH | Shooter Manu Bhaker wins bronze medal in 10m Air Pistol Mixed team event in Paris Olympics 2024
— ANI (@ANI) July 30, 2024
Her father Ramkrishna Bhaker says, "I am very happy. This is big news for the whole country. I thank the countrymen for giving their love and blessings to Manu and also… pic.twitter.com/AE8vDjEiyh
ಈ ಬಗ್ಗೆ ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಮನು ಭಾಕರ್ ಎರಡು ದಿನಗಳ ಹಿಂದೆ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಇದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಆ ಕಾರಣದಿಂದ ಮತ್ತೊಂದು ಪದಕ ಗೆಲ್ಲಲು ಕಾರಣವಾಯಿತು. ಪ್ರಧಾನಿ ಮೋದಿಯವರು ಮಾತನಾಡಿದಾಗ ನನ್ನ ಮಗಳಿಗೆ ಆತ್ಮವಿಶ್ವಾಸ ಹೆಚ್ಚಾಯ್ತು. ಆ ಕಾರಣಕ್ಕೆ ಅವಳು ಗುರಿ ಮುಟ್ಟಲು ಸಹಾಯಕವಾಯಿತು. ಈ ಕೀರ್ತಿ ಪ್ರಧಾನಿಯವರಿಗೆ ಸಲ್ಲಬೇಕು ಎಂದು ರಾಮ್‌ಕೃಷ್ಣ ಭಾಕರ್ ಹೇಳಿದ್ದಾರೆ.