ಸಂಸತ್ ಗಲಾಟೆ: ಪೋಲಿಸ್ ಠಾಣೆ ಮೆಟ್ಟಿಲೇರಿದ ಸಂಸತ್ ಸದಸ್ಯರು
Update: 2024-12-19 15:54 GMT
ಹೊಸದಿಲ್ಲಿ: ಬಿಜೆಪಿಯ ಅನುರಾಗ ಠಾಕೂರ್ ಮತ್ತು ಬಾನ್ಸುರಿ ಸ್ವರಾಜ್ ಸೇರಿದಂತೆ ಮೂವರು ಎನ್‌ಡಿಎ ಸಂಸದರು ಗುರುವಾರ ಸಂಸತ್ತಿನ ಪ್ರವೇಶ ದ್ವಾರದ ಬಳಿ ಆಡಳಿತ ಮತ್ತು ಪ್ರತಿಪಕ್ಷಗಳ ಸಂಸದರ ನಡುವಿನ ತಳ್ಳಾಟ ಕುರಿತು ಪಾರ್ಲಿಮೆಂಟ್ ಸ್ಟ್ರೀಟ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಠಾಕೂರ್ ಮತ್ತು ಸ್ವರಾಜ್ ಟಿಡಿಪಿ ಸಂಸದರೋರ್ವರೊಂದಿಗೆ ಹಿರಿಯ ಪೋಲಿಸ್ ಅಧಿಕಾರಿಗಳನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದರು.