ಭಾರತದ ಪ್ರಪ್ರಥಮ ಜಲಾಂತರ್ಗಾಮಿ ಮೆಟ್ರೊ ಸೇವೆಗೆ ಪ್ರಧಾನಿ ಮೋದಿ ಚಾಲನೆ

Update: 2024-03-06 06:28 GMT

screengrab:X/@ANI

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಪ್ರಥಮ ಜಲಾಂತರ್ಗಾಮಿ ಮೆಟ್ರೊ ಮಾರ್ಗವನ್ನು ಬುಧವಾರಭಾರತದ ಪ್ರಪ್ರಥಮ ಜಲಾಂತರ್ಗಾಮಿ ಮೆಟ್ರೊ ಸೇವೆಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಈ ಮೆಟ್ರೊ ಸುರಂಗ ಮಾರ್ಗವನ್ನು ಕೋಲ್ಕತ್ತಾದ ಹೂಗ್ಲಿ ನದಿಯ ತಳದಲ್ಲಿ ನಿರ್ಮಿಸಲಾಗಿದ್ದು, ಈ ಮಾರ್ಗವು ಹೌರಾ ಮೈದಾನದಿಂದ ಎಸ್‌ಪ್ಲನೇಡ್‌ವರೆಗೆ ಸಂಪರ್ಕಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಮೆಟ್ರೊ ಪ್ರಯಾಣ ಬೆಳೆಸಿದರು. 

ಹೂಗ್ಲಿ ನದಿಯ ಕೆಳಗಿನ 520 ಮೀಟರ್ ಮಾರ್ಗವನ್ನು ಮೆಟ್ರೊ ರೈಲು ಕೇವಲ 45 ಸೆಕೆಂಡುಗಳಲ್ಲಿ ಕ್ರಮಿಸಲಿದೆ ಎಂದು ಹೇಳಲಾಗಿದೆ.

ಈ ಜಲಾಂತರ್ಗಾಮಿ ಮೆಟ್ರೊ ಮಾರ್ಗವು ಕೋಲ್ಕತ್ತಾದ ಅವಳಿ ನಗರಗಳಾದ ಹೌರಾ ಮತ್ತು ಸಾಲ್ಟ್ ಲೇಕ್ ಅನ್ನು ಸಂಪರ್ಕಿಸಲಿದೆ. ಈ ಮಾರ್ಗದಲ್ಲಿ ಒಟ್ಟು ಆರು ಮಾರ್ಗಗಳಿದ್ದು, ಈ ಪೈಕಿ ಮೂರು ಮಾರ್ಗಗಳು ಭೂತಳದಲ್ಲಿವೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News