ಗಾಂಧಿ ಜಯಂತಿ ಅಂಗವಾಗಿ ಶಾಲೆಯಲ್ಲಿ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

Update: 2024-10-02 05:22 GMT

Photo:X/@narendramodi

ಹೊಸದಿಲ್ಲಿ: ಗಾಂಧಿ ಜಯಂತಿಯ ಅಂಗವಾಗಿ ದಿಲ್ಲಿಯ ಪುಂಡಿತಾರಾ ಪಾರ್ಕ್ ಪ್ರದೇಶದಲ್ಲಿರುವ ನವ್ ಯುಗ್ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತಾ ಆಂದೋಲನದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ ಅವರು, ಸ್ವಚ್ಛತೆ ಮತ್ತು ಶುಚಿತ್ವದ ಮಹತ್ವದ ಕುರಿತು ವಿವರಿಸಿದರು.

ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಸ್ವಚ್ಛ ಭಾರತ ಅಭಿಯಾನ ಕೇವಲ ಅಭಿಯಾನವಲ್ಲ. ಅದು, ದೈನಂದಿನ ಜೀವನದ ಪ್ರಮುಖ ಭಾಗ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ತಮ್ಮ ಸುತ್ತಮುತ್ತಲಿನ ಪರಿಸರದ ಹೊಣೆ ಹೊರುವಂತೆ ಪ್ರೋತ್ಸಾಹಿಸಿದ ಅವರು, ಪರಿಸರದ ನೈರ್ಮಲ್ಯಕ್ಕೆ ಕೊಡುಗೆ ನೀಡುವಂತೆ ಕಿವಿಮಾತು ಹೇಳಿದರು. “ಸ್ವಚ್ಛತೆ ನಮ್ಮ ಮೌಲ್ಯಗಳು ಹಾಗೂ ನಮ್ಮ ನೆರೆಹೊರೆಯವರ ಕುರಿತ ಗೌರವದ ಪ್ರತಿಫಲನವಾಗಿದೆ” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಇದಾದ ನಂತರ ವಿದ್ಯಾರ್ಥಿಗಳೊಂದಿಗೆ ಯೋಗಾಸನ ಅವಧಿಯಲ್ಲಿ ಪಾಲ್ಗೊಂಡ ಮೋದಿ, ಯೋಗಾಸನದಿಂದ ಆಗುವ ದೈಹಿಕ ಮತ್ತು ಮಾನಸಿಕ ಲಾಭಗಳ ಕುರಿತು ಒಳನೋಟದ ವಿವರಗಳನ್ನು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News