'ಅಮೃತ್‌ ಕಾಲ್‌' ಅನ್ನು 'ಕರ್ತವ್ಯ ಕಾಲ್‌' ಎಂದು ಮರುನಾಮಕರಣ ಮಾಡಿದ ಪ್ರಧಾನಿ

ದೇಶಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷಗಳಾಗುವ 2047ರ ತನಕದ ಅವಧಿಯು “ಕರ್ತವ್ಯ ಕಾಲ್”‌ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Update: 2023-07-05 11:53 GMT
Editor : Muad | Byline : ವಾರ್ತಾಭಾರತಿ

Photo: PTI

ಹೊಸದಿಲ್ಲಿ: ದೇಶಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷಗಳಾಗುವ 2047ರ ತನಕದ ಅವಧಿಯು “ಕರ್ತವ್ಯ ಕಾಲ್”‌ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ತನ್ನ ಕರ್ತವ್ಯಗಳನ್ನು ತನ್ನ ಮೊದಲ ಆದ್ಯತೆಯನ್ನಾಗಿಸಿ ಭಾರತವು ಮುಂದಕ್ಕೆ ಸಾಗುತ್ತಿದೆ, ಸ್ವಾತಂತ್ರ್ಯ ದೊರೆತು 100 ವರ್ಷಗಳನ್ನು ಗಮನದಲ್ಲಿರಿಸಿಕೊಂಡು ನಾವು ಅಮೃತ್‌ ಕಾಲ್‌ ಅನ್ನು ಕರ್ತವ್ಯ ಕಾಲ್‌ ಎಂದು ಹೆಸರಿಸಿದ್ದೇವೆ,” ಎಂದು ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಮೋದಿ ಹೇಳಿದರು.

ಅಮೃತ್‌ ಕಾಲ್‌ ಎಂಬ ಪದವನ್ನು ಪ್ರಧಾನಿಯೇ 2021ರಲ್ಲಿ ಪರಿಚಯಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದಂದಿನಿಂದ 100 ವರ್ಷಗಳಾಗುವ 2047 ನಡುವಿನ ಅವಧಿಯು ಅಮೃತ್‌ ಕಾಲ್‌ ಆಗಿರಲಿದೆ ಎಂದು ಮೋದಿ ಆಗ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News