“ಮೋದೀಜಿ ಅವರ ಜಗತ್ತಿನಲ್ಲಿ ಸತ್ಯವನ್ನು ಹೊರಹಾಕಬಹುದು, ವಾಸ್ತವದಲ್ಲಲ್ಲ”: ತಮ್ಮ ಭಾಷಣದ ಭಾಗಗಳನ್ನು ಕಡತದಿಂದ ಕಿತ್ತು ಹಾಕಿದ ಕುರಿತು ರಾಹುಲ್‌ ಗಾಂಧಿ ಪ್ರತಿಕ್ರಿಯೆ

Update: 2024-07-02 07:57 GMT

Screengrab:X/@ANI

ಹೊಸದಿಲ್ಲಿ: ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಸೋಮವಾರ ಸಂಸತ್ತಿನಲ್ಲಿ ಮಾಡಿದ ಚೊಚ್ಚಲ ಪ್ರಖರ ಭಾಷಣವು ಆಡಳಿತ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿರುವ ನಡುವೆ ಅವರ ಭಾಷಣದ ಅನೇಕ ಭಾಗಗಳನ್ನು ಲೋಕಸಭೆಯ ಕಡತದಿಂದ ತೆಗೆದುಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು “ನಾನು ಹೇಳಬೇಕಾಗಿದ್ದನ್ನು ಹೇಳಿದೆ ಮತ್ತು ಅದು ಸತ್ಯ. ಮೋದೀಜಿ ಅವರ ಜಗತ್ತಿನಲ್ಲಿ ಅವರು ಸತ್ಯವನ್ನು ಹೊರಹಾಕಬಹುದು, ಆದರೆ ವಾಸ್ತವದಲ್ಲಲ್ಲ. ಸತ್ಯ ಯಾವತ್ತೂ ಜಯಿಸುವುದು,” ಎಂದು ಸಂಸತ್‌ ಸಂಕೀರ್ಣದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್‌ ಹೇಳಿದರು.

ಸೋಮವಾರದ ತಮ್ಮ ಸಂಸತ್‌ ಭಾಷಣದಲ್ಲಿ ದ್ವೇಷ ಮತ್ತು ಹಿಂಸೆಯನ್ನು ಹರಡುತ್ತಿವೆ ಎಂದು ಹೇಳಿ ರಾಹುಲ್‌ ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ಕಿಡಿಕಾರಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಬಿಜೆಪಿ ನಾಯಕರು, ರಾಹುಲ್‌ ಸುಳ್ಳುಗಳನ್ನು ಹರಡುತ್ತಿದ್ದಾರೆ, ಸದನವನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಹಾಗೂ ಇಡೀ ಹಿಂದು ಸಮುದಾಯ ಹಿಂಸಾತ್ಮಕ ಎಂದು ಹೇಳುತ್ತಿದ್ದಾರೆ,"”ಎಂದಿತ್ತು.

ಪ್ರಧಾನಿ ನರೇಂದ್ರ ಮೋದಿ ಕೂಡ ರಾಹುಲ್‌ ಭಾಷಣ ಮಾಡುತ್ತಿರುವಾಗ ಮಧ್ಯ ಪ್ರವೇಶಿಸಿ, “ಹಿಂದು ಸಮುದಾಯವನ್ನು ಹಿಂಸಾತ್ಮಕ ಎಂದು ಹೇಳುವುದು ತುಂಬಾ ಗಂಭೀರ ವಿಚಾರ,” ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News