ಈಡಿಯಿಂದ ಸಲ್ಮಾನ್ ಖುರ್ಷಿದ್ ಪತ್ನಿಗೆ ಸಮನ್ಸ್

Update: 2024-02-10 15:07 GMT

 ಸಲ್ಮಾನ್ ಖುರ್ಷಿದ್‌, ಲೂಯಿಸ್ ಖುರ್ಷಿದ್‌ | Photo: PTI 

*Click* 👉 https://www.varthabharati.in/bangalore-city/farmers-conference-presented-19-resolutions-including-krishi-salamanna-1993846

http://www.varthabharati.in

ಲಕ್ನೋ: ಸರಕಾರಿ ನಿಧಿಗಳನ್ನು ದುರುಪಯೋಗಪಡಿಸಿದ ಆರೋಪದಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್‌ರ ಪತ್ನಿ ಲೂಯಿಸ್ ಖುರ್ಷಿದ್‌ರಿಗೆ ಅನುಷ್ಠಾನ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿದೆ ಎಂದು ಸರಕಾರದ ಮೂಲವೊಂದು ತಿಳಿಸಿದೆ.

ಲೂಯಿಸ್ ಖುರ್ಷಿದ್ ಮುಖ್ಯಸ್ಥರಾಗಿರುವ ಟ್ರಸ್ಟ್ ಮೂಲಕ ನಡೆದಿರುವ ಕೃತಕ ಕೈ-ಕಾಲುಗಳ ವಿತರಣೆಯಲ್ಲಿ ಸರಕಾರಿ ಹಣದ ದುರುಪಯೋಗವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಮ್‌ಎಲ್‌ಎ)ಯ ವಿಧಿಗಳಡಿಯಲ್ಲಿ ಫೆಬ್ರವರಿ 15ರಂದು ಲಕ್ನೋದಲ್ಲಿರುವ ಅನುಷ್ಠಾನ ನಿರ್ದೇಶನಾಲಯ ವಲಯ ಕಚೇರಿಯಲ್ಲಿ ಹೇಳಿಕೆಗಳನ್ನು ನೀಡುವಂತೆ ಅವರಿಗೆ ಸೂಚಿಸಲಾಗಿದೆ.

ಎರಡು ದಿನಗಳ ಹಿಂದೆ ಉತ್ತರಪ್ರದೇಶದ ಬರೇಲಿಯಲ್ಲಿರುವ ಎಮ್‌ಪಿ-ಎಮ್‌ಎಲ್‌ಎ ನ್ಯಾಯಾಲಯವೊಂದು ಇದೇ ಪ್ರಕರಣದಲ್ಲಿ ಲೂಯಿಸ್ ಮತ್ತು ಇನ್ನೋರ್ವ ವ್ಯಕ್ತಿಯ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಅದು ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ನಿಗದಿಪಡಿಸಿದೆ.

2017ರಲ್ಲಿ ಉತ್ತರಪ್ರದೇಶ ಪೊಲೀಸರು ದಾಖಲಿಸಿದ್ದ ಮೊಕದ್ದಮೆಯ ಆಧಾರದಲ್ಲಿ ಈಗ ಅನುಷ್ಠಾನ ನಿರ್ದೇಶನಾಲಯವು ಸಮನ್ಸ್ ಹೊರಡಿಸಿದೆ.

2009-10ರಲ್ಲಿ, ಖುರ್ಷಿದ್ ಮತ್ತು ಅವರ ಪತ್ನಿ ಲೂಯಿಸ್ ಖುರ್ಷಿದ್ ಅಧ್ಯಕ್ಷರಾಗಿರುವ ಟ್ರಸ್ಟ್ ಒಂದರ ಕೃತಕ ಕೈ-ಕಾಲುಗಳು ಮತ್ತು ಇತರ ಸಲಕರಣೆಗಳ ವಿತರಣೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಖರ್ಷಿದ್‌ರ ಅಜ್ಜ ಹಾಗೂ ದೇಶದ ಮೂರನೇ ರಾಷ್ಟ್ರಪತಿಯ ಹೆಸರಿನಲ್ಲಿರುವ ‘ಡಾ. ಝಾಕಿರ್ ಹುಸೇನ್ ಮೆಮೋರಿಯಲ್ ಟ್ರಸ್ಟ್’ ಸರಕಾರದ 71 ಲಕ್ಷ ರೂ. ಅನುದಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News