ಶರದ್‌ ಪವಾರ್ ನೇತೃತ್ವದ ಎನ್ ಸಿಪಿ ಗುಂಪಿನ ಚಿಹ್ನೆಯ ಅನಾವರಣ

Update: 2024-02-24 16:29 GMT

ಶರದ್‌ ಪವಾರ್ | Photo: PTI 

ಮುಂಬೈ: ಎನ್ಸಿಪಿ ಸ್ಥಾಪಕ ಶರದ್‌ ಪವಾರ್ ಅವರು ಶನಿವಾರ ತನ್ನ ಗುಂಪಿನ ‘ಕಹಳೆ ಊದುತ್ತಿರುವ ವ್ಯಕ್ತಿ’ ಚಿಹ್ನೆಯನ್ನು ರಾಯಗಡ ಜಿಲ್ಲೆಯ ರಾಯಗಡ ಕೋಟೆಯಲ್ಲಿ ಅನಾವರಣಗೊಳಿಸಿದರು. ಈ ಚಿಹ್ನೆಯು ಜನರ ಕಲ್ಯಾಣಕ್ಕಾಗಿ ಮತ್ತು ಅವರ ಉದ್ಧಾರಕ್ಕಾಗಿ ಶ್ರಮಿಸುವ ಸರಕಾರಕ್ಕಾಗಿ ಹೊಸ ಹೋರಾಟದ ಆರಂಭಕ್ಕೆ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.

ಇತ್ತೀಚಿಗೆ,ಅಜಿತ ಪವಾರ್ ನೇತೃತ್ವದ ಬಣಕ್ಕೆ ನೈಜ ಎನ್ಸಿಪಿ ಎಂದು ಮಾನ್ಯತೆ ನೀಡಿರುವ ಚುನಾವಣಾ ಆಯೋಗವು ಪಕ್ಷದ ‘ಗಡಿಯಾರ’ ಚಿಹ್ನೆಯನ್ನೂ ಅದಕ್ಕೆ ಒಪ್ಪಿಸಿದೆ. ಬಳಿಕ ಶರದ್‌ ಪವಾರ್ ಬಣಕ್ಕೆ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ ಚಂದ್ರ ಪವಾರ್’ ಎಂಬ ಹೆಸರನ್ನು ಹಂಚಿಕೆ ಮಾಡಿದೆ. ಗುರುವಾರ ಅದು ‘ಕಹಳೆಯೂದುತ್ತಿರುವ ವ್ಯಕ್ತಿ’ ಚಿಹ್ನೆಯನ್ನು ಪವಾರ್ ಬಣಕ್ಕೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News