ಈಡಿಯಿಂದ ತೇಜಸ್ವಿಯಾದವ್ ವಿಚಾರಣೆ

Update: 2024-01-30 17:03 GMT

ತೇಜಸ್ವಿ ಯಾದವ್ | Photo: PTI 

ಪಾಟ್ನಾ: ‘ಉದ್ಯೋಗಕ್ಕಾಗಿ ಜಮೀನು’ ಹಗರಣದ ತನಿಖೆಗೆ ಸಂಬಂಧಿಸಿ ಮಾಜಿ ಉಪಮುಖ್ಯಮಂತ್ರಿ, ಆರ್ಡೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಜಾರಿ ನಿರ್ದೇಶನಾಲಯವು ಮಂಗಳವಾರ ವಿಚಾರಣೆ ನಡೆಸಿದೆ. ಈ ಸಂದರ್ಭ ಈಡಿ ಕಚೇರಿಯ ಪ್ರವೇಶದ್ವಾರದ ಬಳಿ ಭಾರೀ ಸಂಖ್ಯೆಯ ಆರ್ಜೆಡಿ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಜಮಾಯಿಸಿದ್ದರು.

ತೇಜಸ್ವಿ ಯಾದವ್ ಅವರು ಬೆಳಗ್ಗೆ 11:35ರ ಸುಮಾರಿಗೆ ಪಾಟ್ನಾದಲ್ಲಿರುವ ಈಡಿ ಕಚೇರಿಯನ್ನು ತಲುಪಿದ್ದರು. ಅವರ ತಂದೆ ಹಾಗೂ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಅವರನ್ನು ದಿಲ್ಲಿಯಿಂದ ಆಗಮಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಸುಮಾರು 9 ತಾಸುಗಳ ಕಾಲ ವಿಚಾರಣೆಗೊಳಪಡಿಸಿದ್ದರು.

ಉದ್ಯೋಗಕ್ಕಾಗಿ ಜಮೀನು ಹಗರಣದಲ್ಲಿ ಲಾಲು ಪ್ರಸಾದ್ ಹಾಗೂ ತೇಜಸ್ವಿ ಯಾದವ್ ಅವರನ್ನು ಪ್ರಶ್ನಿಸಲು ಜಾರಿ ನಿರ್ದೇಶಾಲಯವು ಜನವರಿ 19ರಂದು ಹೊಸದಾಗಿ ಸಮನ್ಸ್ ಜಾರಿಗೊಳಿಸಿತ್ತು.

ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮತ್ರಿ ನಿತೀಶ್ ಕುಮಾರ್ ಅವರು ಆರ್ಜೆಡಿ-ಜೆಡಿಯುವ ನೇತೃತ್ವದ ಮಹಾಘಟಂಧನ್ ಸರಕಾರಕ್ಕೆ ರಾಜೀನಾಮೆ ನೀಡಿ, ಎನ್ಡಿಎಗೆ ಸೇರ್ಪಡೆಗೊಂಡ ಬೆನ್ನಲ್ಲೇ ಲಾಲು ಪ್ರಸಾದ್ ಹಾಗೂ ತೇಜಸ್ವಿ ಯಾದವ್ ಈಡಿ ಮುಂದೆ ಹಾಜರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News