ಆರೋಗ್ಯ ಕ್ಷೇತ್ರದ ವೃತ್ತಿಪರರ ಸುರಕ್ಷತೆ ಖಾತ್ರಿಪಡಿಸಲು ಸಮಿತಿ ರಚಿಸಲು ಮುಂದಾದ ಕೇಂದ್ರ ಸರಕಾರ

Update: 2024-08-17 10:56 GMT

ಆರ್‌ ಜಿ ಕರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ

ಹೊಸದಿಲ್ಲಿ: ಕೊಲ್ಕತ್ತಾದ ಆರ್‌ ಜಿ ಕರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಹಾಗೂ ಆರೋಗ್ಯ ಸೇವಾ ಸಿಬ್ಬಂದಿಗೆ ರಕ್ಷಣೆ ಆಗ್ರಹಿಸಿ ದೇಶಾದ್ಯಂತ ಇಂದು ವೈದ್ಯರು ಮುಷ್ಕರ ನಡೆಸುತ್ತಿರುವ ನಡುವೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆರೋಗ್ಯ ಸೇವಾ ವೃತ್ತಿಪರರ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದೊಂದಿಗೆ ಸಮಿತಿ ರಚಿಸುವುದಾಗಿ ಹೇಳಿದೆ.

ಈ ಸಮಿತಿಯಲ್ಲಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲಾ ಸಂಬಂಧಿತರ ಪ್ರತಿನಿಧಿಗಳಿರಲಿದ್ದಾರೆ ಹಾಗೂ ಎಲ್ಲರ ಸಲಹೆಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿದು ಬಂದಿದೆ.

ಡೆಂಗ್ಯು ಮತ್ತು ಮಲೇರಿಯಾ ಪ್ರಕರಣಗಳ ಏರಿಕೆಯಿರುವುದರಿಂದ ಪರಿಸ್ಥಿತಿಯ ತುರ್ತು ಅಗತ್ಯತೆಯನ್ನು ಪರಿಗಣಿಸಿ ಕರ್ತವ್ಯಕ್ಕೆ ವಾಪಸಾಗುವಂತೆಯೂ ಪ್ರತಿಭಟನಾನಿರತ ವೈದ್ಯರಿಗೆ ಸಚಿವಾಲಯ ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News