ಮಿಜೋರಾಂ ವಿಧಾನಸಭೆಗೆ ಮೊದಲ ಬಾರಿಗೆ ಮೂವರು ಮಹಿಳೆಯರು!

Update: 2023-12-05 04:39 GMT

Photo: TOI

ಐಜ್ವಾಲ್: ಮೂವರು ಮಹಿಳೆಯರು ಬಾರಿ ಮಿಜೋರಾಂ ವಿಧಾನಸಭೆ ಪ್ರವೇಶಿಸಿದ್ದು, ಪುಟ್ಟ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬರಿಗಿಂತ ಹೆಚ್ಚು ಮಂದಿ ಮಹಿಳೆಯರು ವಿಧಾನಸಭೆಯ ಮೆಟ್ಟಲು ತುಳಿದಿದ್ದಾರೆ.

ಝೋರಂ ಪೀಪಲ್ಸ್ ಮೂವ್ಮೆಂಟ್ (ಝೆಡ್ಪಿಎಂ) ಲಾಲ್ರಿನ್ಪುಯಿ ಮತ್ತು ಬರೀಲ್ ವನ್ನೀಹಸಂಗಿ ನೂತನ ಶಾಸಕಿಯರಾಗಿದ್ದು, ಎಂಎನ್ಎಫ್ ಪ್ರಾವೊ ಚಕ್ಮಾ ಕೂಡಾ ವಿಧಾನಸಭೆ ಪ್ರವೇಶಿಸಿದ್ದಾರೆ. ಲಾಲ್ರಿನ್ಪುಯಿ ಅವರು ಲುಂಗ್ಲೀ ಪೂರ್ವ ಕ್ಷೇತ್ರದಿಂದ, ವೆನ್ನೀಹಸಂಗಿ ಐಜ್ವಾಲ್ ದಕ್ಷಿಣ-3 ಹಾಗೂ ಪ್ರಾವೊ ಪಶ್ಚಿಮ ತ್ಯೂಪಿ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.

ಮಿಜೋರಾಂ 1972ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಬಳಿಕ 30 ಸದಸ್ಯರ ವಿಧಾನಸಭೆಗೆ ಮಾಜಿ ಸಿಎಂ ಟಿ.ಸೈಲೊ ಅವರ ಪೀಪಲ್ಸ್ ಕಾನ್ಫರೆನ್ಸ್ ಎಲ್.ತನ್ಮಾವಿ ಮೊಟ್ಟಮೊದಲ ಮಹಿಳಾ ಪ್ರತಿನಿಧಿಯಾಗಿ 1978ರಲ್ಲಿ ಅಯ್ಕೆಯಾಗಿದ್ದರು. 1984ರಲ್ಲಿ ಇದೇ ಪಕ್ಷದ ಥನ್ಸಿಯಾಮಿ ಎರಡನೇ ಮಹಿಳೆಯಾಗಿ ವಿಧಾನಸಭೆ ಪ್ರವೇಶಿಸಿದರೆ, ಎಂಎನ್ಎಫ್ ಲಾಲ್ಹಿಂಪುಲಿ ಮೂರನೆಯವರು. ಇವರು ಸಿಎಂ ಲಾಲ್ಡೆಂಗಾ ಸಂಪುಟದಲ್ಲಿ 1987ರಲ್ಲಿ ಸಚಿವ ಸ್ಥಾನ ಪಡೆದು, ಸಾಧನೆ ಮಾಡಿದ ಮೊದಲ ಮಹಿಳೆ ಎನಿಸಿಕೊಂಡಿದ್ದರು.

2014 ಉಪಚುನಾವಣೆಯಲ್ಲಿ ವನ್ಲಾಲಾಂಪೀ ಚೌಂಗ್ತು ಆಯ್ಕೆಯಾಗಿ, ಕಾಂಗ್ರೆಸ್ ಲಾಲ್ತಾನ್ವಾಲಾ ಸರ್ಕಾರದಲ್ಲಿ ರಾಜ್ಯ ಸಚಿವೆಯೂ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News