ಟೊಮೆಟೋ ಬೆಲೆ ಏರಿಕೆ: ಅಂಗಡಿಗೆ ಬೌನ್ಸರ್‌ ಗಳನ್ನು ನೇಮಿಸಿದ ವಾರಣಾಸಿಯ ವ್ಯಾಪಾರಿ !

Update: 2023-07-09 15:26 GMT
Editor : Muad | Byline : ವಾರ್ತಾಭಾರತಿ

ವಾರಣಾಸಿ: ವಾರಣಾಸಿಯ ಲಂಕಾ ಪ್ರದೇಶದಲ್ಲಿ ಟೊಮೆಟೋ ಕೊಳ್ಳಲು ಬರುವ ಗ್ರಾಹಕರಿಂದ ವಾಗ್ವಾದ ಮತ್ತು ಮಾತಿನ ಚಕಮಕಿಗಳನ್ನು ತಪ್ಪಿಸಲು ತರಕಾರಿ ವ್ಯಾಪಾರಿಯೋರ್ವ ಬೌನ್ಸರ್‌ ಗಳನ್ನು ನೇಮಿಸಿಕೊಂಡ ಘಟನೆ ನಡೆದಿದೆ. ಈಗಾಗಲೇ ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಆದ್ದರಿಂದ ಇಬ್ಬರನ್ನು ಜನರನ್ನು ನಿಯಂತ್ರಿಸಲೆಂದೇ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸಮಾಜವಾದಿ ಪಕ್ಷದ ಕಾರ್ಯಕರ್ತನಾಗಿರುವ ಅಜಯ್ ಫೌಜಿ ಎಂಬವರು ಈ ಹಿಂದೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಹುಟ್ಟುಹಬ್ಬದಂದು ವಾರಣಾಸಿಯಲ್ಲಿ ಟೊಮೆಟೊ ಆಕಾರದ ಕೇಕ್ ಅನ್ನು ಕತ್ತರಿಸಿದ್ದರು.

"ನಾನು ಜನರಲ್ಲಿ ಟೊಮೆಟೊ ದರದ ಬಗ್ಗೆ ವಾದಗಳನ್ನು ಕೇಳುತ್ತಲೇ ಇದ್ದೇನೆ. ನನ್ನ ಅಂಗಡಿಯ ಜನರು ಕೂಡ ಚೌಕಾಸಿ ಮಾಡಲು ಪ್ರಯತ್ನಿಸಿದರು. ಆದ್ದರಿಂದ ನಿರಂತರ ವಾದಗಳನ್ನು ಕೊನೆಗೊಳಿಸಲು, ನಾನು ಬೌನ್ಸರ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ" ಎಂದು ಫೌಜಿ ಪಿಟಿಐಗೆ ತಿಳಿಸಿದರು.

ಟೊಮೇಟೊವನ್ನು ಕೆಜಿಗೆ 140-160 ರೂ.ಗೆ ಮಾರಾಟ ಮಾಡುತ್ತಿರುವ ಫೌಜಿ, ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಮ್ಮ ಗಾಡಿಯಲ್ಲಿ ಬೌನ್ಸರ್‌ಗಳನ್ನು ನಿಯೋಜಿಸಿದ್ದಾರೆ.

ಆದರೆ, ಅವರು ಎಷ್ಟು ಮೊತ್ತಕ್ಕೆ ಅವರನ್ನು ನೇಮಿಸಿಕೊಂಡರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು. "ಯಾರೂ ಉಚಿತವಾಗಿ ಬೌನ್ಸರ್‌ಗಳನ್ನು ನೇಮಕ ಮಾಡುವುದಿಲ್ಲ" ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಫೌಜಿ ಮತ್ತು ಅವರ ಬೌನ್ಸರ್‌ಗಳಿಗೆ ಸಂಬಂಧಿಸಿದ ಸುದ್ದಿ ಕ್ಲಿಪ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು "ಬಿಜೆಪಿಯು ಟೊಮೆಟೊಗಳಿಗೆ 'ಝೆಡ್-ಪ್ಲಸ್' ಭದ್ರತೆಯನ್ನು ನೀಡಬೇಕು" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News