ಸಜ್ಜನಿಕೆ, ವಿನಮ್ರತೆಯ ಸಾಕಾರಮೂರ್ತಿಯನ್ನು ಕಾಂಗ್ರೆಸ್ ಕಳೆದುಕೊಂಡಿದೆ : ಸೋನಿಯಾ ಸಂತಾಪ
ಹೊಸದಿಲ್ಲಿ : ಪ್ರಧಾನಿ ಮನಮೋಹನ್‌ಸಿಂಗ್ ಅವರು ತನ್ನ ಸ್ನೇಹಿತ, ತತ್ವಜ್ಞಾನಿ ಹಾಗೂ ಮಾರ್ಗದರ್ಶಕರಾಗಿದ್ದು, ಅವರ ನಿಧನವು ತನಗಾದ ವೈಯಕ್ತಿಕ ನಷ್ಟವೆಂದು ಕಾಂಗ್ರೆಸ್ ಸಂಸದೀಯ ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಶುಕ್ರವಾರ ಕಂಬನಿ ಮಿಡಿದಿದ್ದಾರೆ.
ವಿವೇಕ, ಸಜ್ಜನಿಕೆ ಹಾಗೂ ವಿನಮ್ರತೆಯ ಪ್ರತಿಬಿಂಬವಾಗಿದ್ದ ನಾಯಕನೊಬ್ಬನನ್ನು ಪಕ್ಷವು ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಮನಮೋಹನ್ ಅವರ ಅಗಲಿಕೆಯಿಂದ ರಾಷ್ಟ್ರೀಯ ಬದುಕಿನಲ್ಲಿ ಉಂಟಾಗಿರುವ ಶೂನ್ಯವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ. ಭಾರತದ ಪ್ರಗತಿ ಹಾಗೂ ಬೆಳವಣಿಗೆಗೆ, ಡಾ. ಮನಮೋಹನ್‌ಸಿಂಗ್ ನೀಡಿದ ಕೊಡುಗೆಯನ್ನು ಅಳೆಯಲು ಸಾಧ್ಯವಿಲ್ಲವೆಂದು ಆಕೆ ಹೇಳಿದರು.
ಡಾ.ಮನಮೋಹನ್ ಸಿಂಗ್ ಅವರು ಹೃದಯ ಹಾಗೂ ವಿವೇಕದೊಂದಿಗೆ ದೇಶಕ್ಕೆ ಕೊಡುಗೆಯನ್ನು ನೀಡಿದರು.ಅವರೊಬ್ಬ ಕಾಂಗ್ರೆಸ್ ಪಕ್ಷದ ಪ್ರಜ್ವಲವಾದ ಹಾಗೂ ಒಲುಮೆಯ ದಾರಿದೀಪವಾಗಿದ್ದರು. ಅವರು ಸಹಾನುಭೂತಿ ಹಾಗೂ ದೂರದೃಷ್ಟಿಯು ಕೋಟ್ಯಂತರ ಭಾರತೀಯರ ಬದುಕನ್ನು ಪರಿವರ್ತಿಸಿದೆ ಹಾಗೂ ಅವರನ್ನು ಸಬಲೀಕರಣಗೊಳಿಸಿದೆ’’ ಎಂದು ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ತಿಳಿಸಿದರು.