ಅಲಹಾಬಾದ್ ಹೈಕೋರ್ಟ್‌ನಿಂದ ಆಗ್ರಾದ ಸ್ನಾನಗೃಹಕ್ಕೆ ಮಧ್ಯಂತರ ರಕ್ಷಣೆ

Update: 2024-12-27 15:34 GMT

ಅಲಹಾಬಾದ್ ಹೈಕೋರ್ಟ್‌ | PTI 

ಅಲಹಾಬಾದ್ : ಆಗ್ರಾದಲ್ಲಿರುವ 17ನೇ ಶತಮಾನದ ಹಮ್ಮಾಮ್ ಅಥವಾ ಸ್ನಾನ ಗೃಹವನ್ನು ಖಾಸಗಿ ವ್ಯಕ್ತಿಗಳು ನೆಲಸಮಗೊಳಿಸುವುದರಿಂದ ರಕ್ಷಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಗುರುವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಉತ್ತರಪ್ರದೇಶದ ಆಡಳಿತಕ್ಕೆ ನಿರ್ದೇಶಿಸಿದೆ.

ಚಂದ್ರಪಾಲ ಸಿಂಗ್ ರಾಣಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಲೀಲ್ ರಾಯ್ ಹಾಗೂ ಸಮಿತ್ ಗೋಪಾಲ್ ಅವರನ್ನು ಒಳಗೊಂಡ ಪೀಠ ಈ ಮಧ್ಯಂತರ ಆದೇಶ ನೀಡಿದೆ.

ಖಾಸಗಿ ವ್ಯಕ್ತಿಗಳು ನೆಲಸಮಗೊಳಿಸುವ ಸಾಧ್ಯತೆ ಇರುವುದರಿಂದ, ಈ ಪಾರಂಪರಿಕ ಕಟ್ಟಡಕ್ಕೆ ರಕ್ಷಣೆ ನೀಡುವಂತೆ ಕೋರಿ ಚಂದ್ರಪಾಲ್ ಸಿಂಗ್ ರಾಣಾ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯ ಸಂದರ್ಭ ಸ್ಮಾರಕಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವಂತೆ ನ್ಯಾಯಾಲಯ ಆಡಳಿತಕ್ಕೆ ಆದೇಶ ನೀಡಿತು. ಸ್ಮಾರಕವನ್ನು ನೆಲಸಮಗೊಳಿಸುವುದನ್ನು ತಡೆಯಲು ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಕೂಡ ನ್ಯಾಯಾಲಯ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿತು.

ತಾನು ಪ್ರತಿಪಾದಿಸುವ ಕಟ್ಟಡ ರಾಷ್ಟ್ರೀಯ ಪ್ರಾಮಖ್ಯತೆ ಹೊಂದಿದೆ. ಇದನ್ನು ಸ್ಮಾರಕವೆಂದು ಘೋಷಿಸಲಾಗಿಲ್ಲ ಎಂದು ದೂರುದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News