ಕನ್ವರಿಯಾಗಳಿಗೆ ಕಾರು ಡಿಕ್ಕಿ | ದಿಲ್ಲಿ-ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧ

Update: 2024-07-28 15:33 GMT

ಸಾಂದರ್ಭಿಕ ಚಿತ್ರ | PTI 

ಘಾಝಿಯಾಬಾದ್: ಶನಿವಾರ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕನ್ವರಿಯಾಗಳಿಗೆ ಕಾರೊಂದು ಡಿಕ್ಕಿ ಹೊಡೆಯಿತು ಎಂಬ ಆರೋಪ ಕೇಳಿ ಬಂದ ಮರು ದಿನವಾದ ರವಿವಾರದಂದು ಪೊಲೀಸರು ದಿಲ್ಲಿ-ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧ ಹೇರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಘಾಝಿಯಾಬಾದ್ ಪೊಲೀಸ್ ಆಯುಕ್ತ ಅಜಯ್ ಕುಮಾರ್ ಮಿಶ್ರಾ , "ಮೋದಿನಗರದ ಕದ್ರಾಬಾದ್ ನಿಂದ ಘಾಝಿಯಾಬಾದ್ ಜಿಲ್ಲೆಯಿಂದ ಮೀರತ್ ರಸ್ತೆಯ ಮೂರು ಕೂಡು ರಸ್ತೆಯವರೆಗೆ, ಮೋಹನ್ ನಗರ್, ಲೋನಿ ರಸ್ತೆ, ಲಿಂಕ್ ರಸ್ತೆ, ಉತ್ತರಪ್ರದೇಶ-ದಿಲ್ಲಿ ಗಡಿಯಿಂದ ದಿಲ್ಶಾದ್ ಗಾರ್ಡನ್ ವರೆಗೆ ವಾಹನಗಳ ಪ್ರವೇಶವನ್ನು ತಡೆಯಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

“ಈ ಸಂಚಾರ ಯೋಜನೆಯನ್ನು ಖಾತರಿಪಡಿಸಲು ನಾಗರಿಕ ಹಾಗೂ ಸಂಚಾರಿ ಪೊಲೀಸರು ಹೆಚ್ಚುವರಿ ನಿಗಾ ವಹಿಸಲಿದ್ದಾರೆ. ಜನರ ಗುಂಪು ನಿರ್ಗಮಿಸುವ ಕೇಂದ್ರದಲ್ಲಿ ಆ ಪ್ರದೇಶದ ನಾಗರಿಕ ಸಂಘಟನೆಗಳ ಸ್ವಯಂಸೇವಕರು ಪೊಲೀಸರಿಗೆ ನೆರವು ನೀಡಲಿದ್ದಾರೆ ಹಾಗೂ ಆ ಪ್ರದೇಶದಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಯ ಕುರಿತು ಮಾಹಿತಿ ನೀಡಲಿದ್ದಾರೆ” ಎಂದು ಅವರು ಹೇಳಿದ್ದಾರೆ.

ಶನಿವಾರ ಕಾರು ಡಿಕ್ಕಿ ಹೊಡೆದಿದ್ದಕ್ಕೆ ಆಕ್ರೋಶಗೊಂಡಿದ್ದ ಕನ್ವರಿಯಾಗಳು ಕಾರನ್ನು ಚಲಾಯಿಸುತ್ತಿದ್ದ ಚಾಲಕನನ್ನು ಹೊರಗೆಳೆದು ಆತನನ್ನು ಥಳಿಸಿದ್ದರು ಹಾಗೂ ನಂತರ ಕಾರಿಗೆ ಹಾನಿಯೆಸಗಿದ್ದರು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News