2024ರ ಸೆಪ್ಟೆಂಬರ್ ವರೆಗಿನ ತ್ರೈಮಾಸಿಕದಲ್ಲಿ ನಿರುದ್ಯೋಗ ದರ 6.4%ಕ್ಕೆ ಇಳಿಕೆ : ಸಮೀಕ್ಷೆ

Update: 2024-11-18 16:44 GMT

ಸಾಂದರ್ಭಿಕ ಚಿತ್ರ |  PTI  

ಹೊಸದಿಲ್ಲಿ : 2024ರ ಜುಲೈ ಮತ್ತು ಸೆಪ್ಟೆಂಬರ್ ನಡುವಿನ ತ್ರೈಮಾಸಿಕದಲ್ಲಿ ನಗರ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ನಿರುದ್ಯೋಗ ದರವು ಶೇಕಡಾ 6.4ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ(National Sample Survey)(ಎನ್ಎಸ್ಎಸ್ಒ) ವರದಿಯು ತಿಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ನಿರುದ್ಯೋಗ ದರವು ಶೇಕಡಾ 6.6 ರಷ್ಟಿತ್ತು. ನಗರ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ನಿರುದ್ಯೋಗ ದರವು 2024ರ ಜುಲೈಯಿಂದ ಸೆಪ್ಟೆಂಬರ್ ನಡುವಿನ ತ್ರೈ ಮಾಸಿಕದಲ್ಲಿ 8.4 ಶೇಕಡಾಕ್ಕೆ ಇಳಿದಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ನಿರುದ್ಯೋಗ ದರವು ಶೇಕಡಾ 8.6ರಷ್ಟಿತ್ತು. 2024ರ ಏಪ್ರಿಲ್ ಮತ್ತು ಜೂನ್ ನಡುವಿನ ತ್ರೈ ಮಾಸಿಕದಲ್ಲಿ ಈ ದರವು 9% ದಷ್ಟಿತ್ತು

ನಗರ ಪ್ರದೇಶದ ಪುರುಷರಲ್ಲಿನ ನಿರುದ್ಯೋಗ ದರವು 2024ರ ಜುಲೈ ಮತ್ತು ಸೆಪ್ಟೆಂಬರ್ ನಡುವಿನ ತ್ರೈ ಮಾಸಿಕದಲ್ಲಿ ಶೇಕಡಾ 5.7ಕ್ಕೆ ಇಳಿದಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ನಿರುದ್ಯೋಗ ದರವು ಶೇಕಡಾ 6ರಷ್ಟಿತ್ತು ಮತ್ತು 2024ರ ಏಪ್ರಿಲ್ ಮತ್ತು ಜೂನ್ ನಡುವಿನ ತ್ರೈಮಾಸಿಕದಲ್ಲಿ ಈ ದರವು ಶೇಕಡಾ 5.8 ರಷ್ಟಿತ್ತು ಎಂದು Periodic Labour Force Survey (PLFS) ತಿಳಿಸಿದೆ.

NSSO 2017ರ ಏಪ್ರಿಲ್ ನಲ್ಲಿ PLFS ಅನ್ನು ಪ್ರಾರಂಭಿಸಿದೆ. PLFS ಆಧಾರದ ಮೇಲೆ ತ್ರೈಮಾಸಿಕ ಬುಲೆಟಿನ್ ನ್ನು ಹೊರತರಲಾಗುತ್ತದೆ. ಕಾರ್ಮಿಕರ ಸಂಖ್ಯಾನುಪಾತ (WPR), ಕಾರ್ಮಿಕರ ಭಾಗವಹಿಸುವಿಕೆ ದರ(LFPR), ನಿರುದ್ಯೋಗ ದರದಲ್ಲಿನ ತ್ರೈಮಾಸಿಕ ಬದಲಾವಣೆಗಳನ್ನು PLFS ಮೂಲಕ ಅಂದಾಜಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News