ಬ್ರೆಝಿಲ್ನಲ್ಲಿ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ

Update: 2024-11-18 15:54 GMT

PC : PTI

ಬ್ರಸೀಲಿಯಾ : ಮೂರು ರಾಷ್ಟ್ರಗಳ ಪ್ರವಾಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬ್ರೆಝಿಲ್ಗೆ ಆಗಮಿಸಿದ್ದು ಅವರನ್ನು ಬ್ರೆಝಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ'ಸಿಲ್ವಾ ಸ್ವಾಗತಿಸಿದರು. ಬ್ರೆಝಿಲ್ ನ ರಿಯೊ ಡಿ ಜನೈರೋದ ಮ್ಯೂಸಿಯಂ ಆಫ್ ಮೋಡರ್ನ್ ಆರ್ಟ್ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದಾರೆ.

ಬ್ರೆಝಿಲ್ ಗೆ ಭಾರತದ ರಾಯಭಾರಿ ಸುರೇಶ್ ರೆಡ್ಡಿ ಹಾಗೂ ಉನ್ನತ ನಿಯೋಗದ ಜತೆ ರಿಯೊ ಡಿ ಜನೈರೊದ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡರು. ಪ್ರಧಾನಿಯನ್ನು ಭಾರತದ ಧ್ವಜಗಳನ್ನು ಹಿಡಿದಿದ್ದ ಭಾರತೀಯ ಸಮುದಾಯ ಸಂಸ್ಕೃತ ಪಠಣದೊಂದಿಗೆ ಸ್ವಾಗತಿಸಿತು. ಗುಜರಾತಿ ಉಡುಗೆಯಲ್ಲಿ ನೃತ್ಯಗಾರರು ಸಾಂಪ್ರದಾಯಿಕ ದಾಂಡಿಯಾ ನೃತ್ಯಗಳನ್ನು ಪ್ರದರ್ಶಿಸಿದರು.

ಜಿ20 ಶೃಂಗಸಭೆಯ ಸಮಯದಲ್ಲಿ ಪ್ರಧಾನಿಯವರು ಜಾಗತಿಕ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ಭಾರತದ ನಿಲುವನ್ನು ಮುಂದಿಡುತ್ತಾರೆ ಮತ್ತು ಭಾರತ ಆಯೋಜಿಸಿದ್ದ ಜಿ20 ಹೊಸದಿಲ್ಲಿ ಶೃಂಗಸಭೆಯ ನಾಯಕರ ಘೋಷಣೆ ಮತ್ತು ಜಾಗತಿಕ ದಕ್ಷಿಣ ಶೃಂಗಸಭೆಯ ಧ್ವನಿಯನ್ನು ಪ್ರಸ್ತುತಪಡಿಸುತ್ತಾರೆ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News