ಕೊನೆಯ ವಿಸ್ತಾರಾ ವಿಮಾನಕ್ಕೆ ಸಿಬ್ಬಂದಿಗಳಿಂದ ಭಾವನಾತ್ಮಕ ವಿದಾಯ

Update: 2024-11-12 07:55 GMT

Photo credit: NDTV

ಹೊಸದಿಲ್ಲಿ: ಒಡಿಶಾದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ರೌಂಡ್‌ ಸ್ಟಾಫ್‌ ಮತ್ತು ವಿಮಾನ ಸಿಬ್ಬಂದಿಗಳು ಸೋಮವಾರದ ಕೊನೆಯ ವಿಸ್ತಾರಾ ವಿಮಾನಕ್ಕೆ ಭಾವನಾತ್ಮಕ ವಿದಾಯ ಹೇಳಿದರು.

ವಿಸ್ತಾರವು ಏರ್ ಇಂಡಿಯಾದೊಂದಿಗೆ ವಿಲೀನಗೊಂಡಿದ್ದು, ಅದರ ಕೊನೆಯ ವಿಮಾನವು ಬಿಜು ಪಟ್ನಾಯಕ್‌ ನಿಲ್ದಾಣದಿಂದ ದಿಲ್ಲಿಗೆ ನಿರ್ಗಮಿಸಿದೆ.

ಏರ್ ಇಂಡಿಯಾ-ವಿಸ್ತಾರಾ ಘಟಕದ ಮೊದಲ ವಿಮಾನ ಸೋಮವಾರ ರಾತ್ರಿ ದೋಹಾದಿಂದ ಮುಂಬೈಗೆ ಹೊರಟಿದೆ. 'AI2286' ಕೋಡ್‌ನೊಂದಿಗೆ ಕಾರ್ಯನಿರ್ವಹಿಸುವ ಈ ವಿಮಾನವು ಸ್ಥಳೀಯ ಕಾಲಮಾನ ರಾತ್ರಿ 10.07 ಕ್ಕೆ ದೋಹಾದಿಂದ ಹೊರಟಿದ್ದು, ಮಂಗಳವಾರ ಬೆಳಿಗ್ಗೆ ಮುಂಬೈಗೆ ಇಳಿದಿದೆ. ಇದು ವಿಲೀನ ಪ್ರಕ್ರಿಯೆ ಬಳಿಕದ ಮೊದಲ ಅಂತರರಾಷ್ಟ್ರೀಯ ವಿಮಾನವಾಗಿದೆ.

ವಿಸ್ತಾರಾ-ಏರ್ ಇಂಡಿಯಾ ವಿಲೀನದ ನಂತರ, ವಿಸ್ತಾರಾದ 49 ಶೇಕಡಾ ಮಾಲಕತ್ವ ಹೊಂದಿದ್ದ ಸಿಂಗಾಪುರ್ ಏರ್‌ಲೈನ್ಸ್ ಏರ್ ಇಂಡಿಯಾದಲ್ಲಿ 25.1 ಶೇಕಡಾ ಪಾಲನ್ನು ಪಡೆದುಕೊಂಡಿದೆ.

ವಿಸ್ತಾರಾ ಪ್ರಯಾಣಿಕರಿಗೆ ಸುಲಭವಾಗಲು ಏರ್ ಇಂಡಿಯಾ ಟಚ್ ಪಾಯಿಂಟ್‌ಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್ ಕಿಯೋಸ್ಕ್‌ಗಳು ಸೇರಿದಂತೆ ಹೆಚ್ಚುವರಿ ಸಂಪನ್ಮೂಲಗಳನ್ನು ನಿಯೋಜಿಸಿದೆ. ಶೀಘ್ರದಲ್ಲೇ, ವಿಮಾನ ನಿಲ್ದಾಣದಲ್ಲಿನ ವಿಸ್ತಾರಾ ಟಿಕೆಟಿಂಗ್ ಕಛೇರಿಗಳು ಮತ್ತು ಚೆಕ್-ಇನ್ ಟರ್ಮಿನಲ್‌ಗಳು ಏರ್ ಇಂಡಿಯಾದವು ಆಗಲಿವೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News