ಅಸ್ಪಷ್ಟತೆ ಕುರಿತು ವಿವರಣೆ ಕೋರಿ ವಿಕಿಪೀಡಿಯಾಕ್ಕೆ ಕೇಂದ್ರ ಸರಕಾರ ನೋಟಿಸ್

Update: 2024-11-05 12:09 GMT

 ವಿಕಿಪೀಡಿಯಾ | PC : Wikipedia

ಹೊಸದಿಲ್ಲಿ: ವೆಬ್‌ ಪುಟದ ಲೇಖನಗಳಲ್ಲಿನ ಅಸ್ಪಷ್ಟತೆ ಮತ್ತು ಪಕ್ಷಪಾತದ ಆರೋಪಗಳ ಕುರಿತು ವಿವರಿಸುವಂತೆ ವಿಕಿಪೀಡಿಯಾಕ್ಕೆ ಭಾರತ ಸರ್ಕಾರ ಮಂಗಳವಾರ ನೊಟೀಸ್ ನೀಡಿದೆ.

ವಿಕಿಪೀಡಿಯಾದಲ್ಲಿನ ಪಕ್ಷಪಾತ ಮತ್ತು ತಪ್ಪುಗಳ ಬಗ್ಗೆ ಅನೇಕ ದೂರುಗಳನ್ನು ಸ್ವೀಕರಿಸಿದ ಬಳಿಕ ಕೇಂದ್ರ ಸರಕಾರ ವಿಕಿಪೀಡಿಯಾಕ್ಕೆ ನೋಟಿಸ್‌ ನೀಡಿದೆ. ವಿಕಿಪೀಡಿಯಾವನ್ನು ಮಧ್ಯವರ್ತಿ ಬದಲಿಗೆ ಪ್ರಕಾಶಕ ಎಂದು ಏಕೆ ಪರಿಗಣಿಸಬಾರದು ಎಂದು ವಿವರಣೆ ನೀಡುವಂತೆ ಕೋರಿದೆ.

ಉಚಿತ ಆನ್ಲೈನ್ ವಿಶ್ವಕೋಶ ಎಂದು ಕರೆಯಲ್ಪಡುವ ವಿಕಿಪೀಡಿಯಾವು ಜನರು, ಸಮಸ್ಯೆಗಳು ಮತ್ತು ವಿವಿಧ ಕ್ಷೇತ್ರಗಳ ವಿಚಾರಗಳ ಕುರಿತು ಪುಟಗಳನ್ನು ರಚಿಸಲು ಮತ್ತು ಸಂಪಾದಿಸಲು ಅನುಮತಿಸುತ್ತದೆ. ಲೇಖನಗಳ ರಚನೆ ಮತ್ತು ಅಭಿವೃದ್ಧಿಗೆ ಅನುಕೂಲವಾಗುವಂತೆ ‘ವಿಕಿ’ ಎಂಬ ಸಹಯೋಗದ ಸಾಫ್ಟ್ ವೇರ್‌ ನ್ನು ಬಳಸುತ್ತದೆ.

ಈ ಮೊದಲು ವಿಕಿಪೀಡಿಯಾದ ಪುಟವೊಂದು ತನ್ನ ಬಗ್ಗೆ ಮಾನಹಾನಿಕರ ವಿವರಣೆಯನ್ನು ಹೊಂದಿದೆ ಎಂದು ಆರೋಪಿಸಿ ಎಎನ್ಐ ಮೊಕದ್ದಮೆಯನ್ನು ದಾಖಲಿಸಿತ್ತು. ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ವಿಕಿಮೀಡಿಯಾ ಫೌಂಡೇಷನ್ಗೆ ಸಮನ್ಸ್ ಹೊರಡಿಸಿತ್ತು. ANI ಕುರಿತು ಮಾನಹಾನಿಕರವಾಗಿ ಮಾಹಿತಿ ಎಡಿಟ್ ಮಾಡಿರುವ ಬಳಕೆದಾರರ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ನಿರಾಕರಿಸಿದ ವಿಕಿಪೀಡಿಯಾಕ್ಕೆ ದಿಲ್ಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News