ಜಾತ್ಯಾಧಾರಿತ ತರಗತಿ ಮಾಡಿದ ಪ್ರಾಂಶುಪಾಲೆ ಮನೆಗೆ !

Update: 2016-05-14 09:35 GMT

ಹೊಸದಿಲ್ಲಿ, ಮೇ14: ತರಗತಿಗಳನ್ನು ಜಾತ್ಯಾಧಾರಿತವಾಗಿ ವಿಭಜಿಸಿದ ಶಾಲಾ ಪ್ರಿನ್ಸಿಪಾಲ್‌ರ ಕೆಲಸ ಹೋಯಿತು. ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಸಾತ್ ಫೂಲ್‌ಚಂದ್ ಬಗ್ಲಾಇಂಟರ್ ಕಾಲೇಜ್‌ನಲ್ಲಿ ಈ ಘಟನೆ ನಡೆದಿದೆಎಂದು ವರದಿಯಾಗಿದೆ. ಜಾತ್ಯಾಧಾರಿತ ಕ್ಲಾಸ್‌ಗಳನ್ನು ರಚಿಸಿದ ರಾಧಶ್ಯಾಂ ವರ್ಷಿಣಿಯನ್ನು ಪ್ರಾಂಶುಪಾಲರ ಸ್ಥಾನದಿಂದ ಬದಲಿಸಲಾಗಿದೆ. ಪರಿಶಿಷ್ಟಜಾತಿ, ಹಿಂದುಳಿದವರು, ಇತರರು ಎಂಬಂತೆ ಈಕೆ ತರಗತಿಗಳನ್ನು ರಚಿಸಿ ಅದೇಸಮುದಾಯದ ಅಧ್ಯಾಪಕರುಗಳನ್ನು ಮಕ್ಕಳಿಗೆ ಕಲಿಸಲು ನೇಮಿಸಿದ್ದರು.

ಘಟನೆವಿವಾದವಾಗಿ ಜಿಲ್ಲಾಮ್ಯಾಜಿಸ್ಟ್ರೇಟ್ ಅವಿನಾಶ್ ಕೃಷ್ಣ ಸಿಂಗ್ ಜಿಲ್ಲೆಯ ಶಾಲಾ ಪರೀಕ್ಷಕರಿಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಘಟನೆತನಿಖೆ ನಡೆಸಿದ ಇನ್ಸ್ ಪೆಕ್ಟರ್ ದೂರು ಸರಿಯಾಗಿದೆ ಎಂದುವರದಿ ಸಲ್ಲಿಸಿದ್ದರು. ಆನಂತರ ಪ್ರಿನ್ಸಿಪಾಲರನ್ನು ಸ್ಥಾನದಿಂದ ತೆಗೆದು ಹಾಕಲಾಗಿದೆ.ಒಂಬತ್ತನೆ ತರಗತಿಯಲ್ಲಿ ಒ.ಬಿ.ಸಿ. ತರಗತಿಗಳನ್ನು ಜಾತ್ಯಾಧಾರಿತವಾಗಿ ಪ್ರತ್ಯೇಕ ಮಾಡಲಾಗಿತ್ತು.

ಕಳೆದ ಎಪ್ರಿಲ್‌ನಲ್ಲಿ ಒಂದರಿಂದ ಇಂತಹ ಕ್ಲಾಸ್‌ಗಳು ನಡೆಯುತ್ತಿವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಮಕ್ಕಳನ್ನು ಸಮಾನವಾಗಿ ಪರಿಗಣಿಸಿ ತರಗತಿಯಲ್ಲಿ ಕುಳಿತುಕೊಳ್ಳುವಂತೆ ಅಧ್ಯಾಪಕರಿಗೆ ಸೂಚಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News