"ಕಲಂ 498A ಅಡಿಯಲ್ಲಿನ ಪ್ರಕರಣದಂತೆ ರದ್ದುಗೊಳಿಸಲು ಪ್ರಾರಂಭಿಸಬೇಕಾಗುತ್ತದೆ": PMLA ಪ್ರಕರಣಗಳ ದುರ್ಬಳಕೆ ಬಗ್ಗೆ ಸುಪ್ರೀಂ ಕೋರ್ಟ್

Update: 2024-10-22 06:50 GMT

ಹೊಸದಿಲ್ಲಿ: ಐಪಿಸಿ ಸೆಕ್ಸನ್ 498A ದುರ್ಬಳಕೆ ಗಮನಿಸಿ ಪ್ರಕರಣಗಳನ್ನು ರದ್ದುಗೊಳಿಸಿದಂತೆ PMLA ಪ್ರಕರಣಗಳನ್ನು ಕೂಡ ರದ್ದುಗೊಳಿಸಲು ಪ್ರಾರಂಭಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಸೆಕ್ಷನ್ 498A ಅಡಿಯಲ್ಲಿನ ಪ್ರಕರಣಗಳನ್ನು ರದ್ದುಗೊಳಿಸುವಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ರದ್ದುಗೊಳಿಸುವುದನ್ನು ಪ್ರಾರಂಭಿಸಬೇಕಾಗುತ್ತದೆ ಎಂದು ಹೇಳಿದೆ.

ಭಾರತೀಯ ದಂಡ ಸಂಹಿತೆಯ 498A ನಿಬಂಧನೆಯು ದುರ್ಬಳಕೆಯಾಗುವುದನ್ನು ನಾವು ಗಮನಿಸಿದ್ದೇವೆ. ಪಿಎಂಎಲ್ಎಯಂತಹ ಕಾಯ್ದೆಯನ್ನು ಈ ರೀತಿ ವಿಧಿಸಿದರೆ, ನ್ಯಾಯಾಧೀಶರು ಕೂಡ ಮನುಷ್ಯರೇ, ಪಿಎಂಎಲ್ಎ ಹೇಗೆ ಬಳಕೆಯಾಗುತ್ತಿದೆ ಎಂಬುದರ ಕುರಿತು ಅವರು ಪ್ರತಿದಿನ ಮಾತನಾಡುತ್ತಾರೆ ಎಂದು ನ್ಯಾಯಮೂರ್ತಿ ಓಕಾ ಲಘು ಧಾಟಿಯಲ್ಲಿ ಹೇಳಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಖಲಿಸಿರುವ ವಂಚನೆ, ಭ್ರಷ್ಟಾಚಾರ ಪ್ರಕರಣ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಪಿಎಂಎಲ್ ಎ ಪ್ರಕರಣವನ್ನು ರದ್ದುಗೊಳಿಸಲು ಛತ್ತೀಸ್ ಗಢ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ತುತೇಜಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಕೋರ್ಟ್ ಈ ಅವಲೋಕನ ಮಾಡಿದೆ.

2024ರ ಆ.20ರಂದು ಛತ್ತೀಸ್ ಗಢದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು. ತುತೇಜಾ ಅವರಿಗೆ 2020ರಲ್ಲಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News