ಅಮೆರಿಕ | ಕುಖ್ಯಾತ ಡ್ರಗ್ಸ್ ಕಳ್ಳಸಾಗಣೆದಾರ ಸುನೀಲ್ ಯಾದವ್ ಗೆ ಗುಂಡಿಕ್ಕಿ ಹತ್ಯೆ
ಕ್ಯಾಲಿಫೋರ್ನಿಯ : ರಾಜಸ್ಥಾನದಲ್ಲಿನ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ಕುಖ್ಯಾತ ಡ್ರಗ್ಸ್ ಕಳ್ಳಸಾಗಣೆದಾರ ಸುನೀಲ್ ಯಾದವ್ ನನ್ನು ಕ್ಯಾಲಿಫೋರ್ನಿಯಾದ ಸ್ಟಾಕ್ಟನ್ ನಗರದಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.
ಸುನೀಲ್ ಯಾದವ್ ಕುಖ್ಯಾತ ಡ್ರಗ್ಸ್ ಕಳ್ಳಸಾಗಣೆದಾರನಾಗಿದ್ದು, ಪಾಕಿಸ್ತಾನದ ಮಾರ್ಗದ ಮೂಲಕ ಡ್ರಗ್ಸ್ ಗಳನ್ನು ಭಾರತಕ್ಕೆ ಸಾಗಿಸುತ್ತಿದ್ದ ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆ ವಶಪಡಿಸಿಕೊಳ್ಳಲಾಗಿದ್ದ 300 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಪ್ರಕರಣದಲ್ಲಿ ಸುನೀಲ್ ಯಾದವ್ ಹೆಸರು ಮೊದಲ ಬಾರಿಗೆ ಕೇಳಿ ಬಂದಿತ್ತು ಎಂದು ಹೇಳಲಾಗಿದೆ.
ಸುನೀಲ್ ಯಾದವ್ ಹತ್ಯೆಯ ಹೊಣೆಯನ್ನು ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಭಾಗವಾಗಿರುವ ರೋಹಿತ್ ಗೊದಾರ ಹೊತ್ತುಕೊಂಡಿದ್ದು, “ಆತ ಪಂಜಾಬ್ ಪೊಲೀಸರೊಂದಿಗೆ ಕೈಜೋಡಿಸಿ, ನನ್ನ ಸಹೋದರ ಅಂಕಿತ್ ಭಾಡುನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ. ನಾವೀಗ ಆತನ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದ್ದೇವೆ” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಅಂಕಿತ್ ಭಾಡು ಹತ್ಯೆಯಲ್ಲಿ ತನ್ನ ಪಾತ್ರವಿದೆ ಎಂಬ ಮಾತುಗಳು ಹರಡುತ್ತಿದ್ದಂತೆಯೆ, ಸುನೀಲ್ ಯಾದವ್ ಭಾರತದಿಂದ ಪರಾರಿಯಾಗಿದ್ದ ಎಂದೂ ಆತ ಹೇಳಿದ್ದಾನೆ. “ಅಮೆರಿಕದಲ್ಲಿ ಆತ ನನ್ನ ಸಹೋದರರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ” ಎಂದು ಆತ ಆರೋಪಿಸಿದ್ದಾನೆ.
ಭದ್ರತಾ ಸಂಸ್ಥೆಗಳ ಮೂಲಗಳ ಪ್ರಕಾರ, ರಾಹುಲ್ ಎಂಬ ನಕಲಿ ಪಾಸ್ ಪೋರ್ಟ್ ಬಳಸಿ, ಎರಡು ವರ್ಷಗಳ ಹಿಂದೆ ಸುನೀಲ್ ಯಾದವ್ ಅಮೆರಿಕಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ.
ಮೂಲತಃ ಪಂಜಾಬ್ ನ ಫಝಿಲ್ಕಾ ಜಿಲ್ಲೆಯ ಅಬೋಹರ್ ನಿವಾಸಿಯಾದ ಸುನೀಲ್ ಯಾದವ್, ಒಂದು ಕಾಲದಲ್ಲಿ ಲಾರೆನ್ಸ್ ಬಿಷ್ಣೋಯಿ ಹಾಗೂ ರೋಹಿತ್ ಗೊಡಾರಾಗೆ ಆಪ್ತನಾಗಿದ್ದ. ಆದರೆ, ರೋಹಿತ್ ಗೊಡಾರಾನ ಸಹೋದರ ಅಂಕಿತ್ ಭಾಡು ಹತ್ಯೆಯ ನಂತರ, ಅವರಿಬ್ಬರ ವಿರೋಧಿಯಾಗಿ ಬದಲಾಗಿದ್ದ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, ದುಬೈನಲ್ಲಿ ವಾಸಿಸುತ್ತಿದ್ದ ಸುನೀಲ್ ಯಾದವ್ ನನ್ನು ದುಬೈ ಪ್ರಾಧಿಕಾರಗಳ ನೆರವಿನೊಂದಿಗೆ ರಾಜಸ್ಥಾನ ಪೊಲೀಸರು ಬಂಧಿಸಿ, ಭಾರತಕ್ಕೆ ಕರೆ ತಂದಿದ್ದರು. ರಾಜಸ್ಥಾನದ ಗಂಗಾನಗರ ಜಿಲ್ಲೆಯ ಆಭರಣ ವ್ಯಾಪಾರಿ ಪಂಕಜ್ ಸೋನಿ ಹತ್ಯೆಯಲ್ಲೂ ಆತ ಆರೋಪಿಯಾಗಿದ್ದ. ನಂತರ, ಆತ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎಂದು ಹೇಳಲಾಗಿದೆ.
ಸುನೀಲ್ ಯಾದವ್ ನನ್ನು ಹೇಗೆ ಗುಂಡಿಟ್ಟು ಹತ್ಯೆಗೈಯ್ಯಲಾಯಿತು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಇನ್ನಷ್ಟು ತನಿಖೆ ಕೈಗೊಂಡಿದ್ದಾ