ʼತರಕಾರಿ ಕತ್ತರಿಸುವ ಚಾಕುವಿನಿಂದ ಬೈಪಾಸ್ ಶಸ್ತ್ರಚಿಕಿತ್ಸೆʼ: ತನ್ನ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್ಕರ್ ಮೊದಲ ಪ್ರತಿಕ್ರಿಯೆ

Update: 2024-12-24 19:32 IST
ʼತರಕಾರಿ ಕತ್ತರಿಸುವ ಚಾಕುವಿನಿಂದ ಬೈಪಾಸ್ ಶಸ್ತ್ರಚಿಕಿತ್ಸೆʼ: ತನ್ನ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್ಕರ್ ಮೊದಲ ಪ್ರತಿಕ್ರಿಯೆ

Photo | PTI

  • whatsapp icon

ಹೊಸದಿಲ್ಲಿ: ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್ಕರ್ ತಮ್ಮ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ 'ಅವಿಶ್ವಾಸ' ನಿರ್ಣಯದ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ʼಪ್ರತಿಪಕ್ಷಗಳು ತರಕಾರಿ ಕತ್ತರಿಸುವ ಚಾಕುವಿನಿಂದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿಗಳು ಹಾಗೂ ರಾಜ್ಯಸಭಾ ಸ್ಪೀಕರ್‌ ಆದ ಜಗದೀಪ್ ಧನ್ಕರ್ ತಮ್ಮ ನಿವಾಸದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಾ, ರಾಜ್ಯಸಭಾ ಸ್ಪೀಕರ್ ವಿರುದ್ಧದ 'ಅವಿಶ್ವಾಸ' ನಿರ್ಣಯದ ನೋಟಿಸ್ ನೋಡಿ, ಬೈಪಾಸ್ ಸರ್ಜರಿಗೆ ತರಕಾರಿ ಕತ್ತರಿಸುವ ಚಾಕುವನ್ನು ಎಂದಿಗೂ ಬಳಸಬೇಡಿ ಎಂದು ಚಂದ್ರಶೇಖರ್ ಅವರು ಹೇಳಿದ್ದರು ಎಂದು ಮಾಜಿ ಪ್ರಧಾನಿ ಚಂದ್ರಶೇಖರ್ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ.

ʼಆ ಸೂಚನೆಯು ತರಕಾರಿ ಕತ್ತರಿಸುವ ಚಾಕು ಕೂಡ ಅಲ್ಲ, ಅದು ತುಕ್ಕು ಹಿಡಿದಿತ್ತು, ಆತುರವಿತ್ತು. ಅದನ್ನು ಓದಿದಾಗ ನನಗೆ ಆಶ್ಚರ್ಯವಾಯಿತು, ನಿಮ್ಮಲ್ಲಿ ಯಾರಾದರೂ ಅದನ್ನು ಓದಿದ್ದರೆ, ನೀವು ದಿನಗಟ್ಟಲೆ ನಿದ್ದೆ ಮಾಡುತ್ತಿರಲಿಲ್ಲ. ಅಭಿವ್ಯಕ್ತಿಯು ಸಮರ್ಥವಾಗಿದ್ದರೆ, ರಾಜಿ ಮಾಡಿಕೊಂಡರೆ ಅಥವಾ ಬಲವಂತಕ್ಕೆ ಒಳಪಟ್ಟಿದ್ದರೆ, ಪ್ರಜಾಸತ್ತಾತ್ಮಕ ಮೌಲ್ಯಗಳು ದೋಷಪೂರಿತವಾಗಿರುತ್ತವೆ. ಇದು ಪ್ರಜಾಸತ್ತಾತ್ಮಕ ವಿಕಸನಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಕನಿಷ್ಠ 60 ಮಂದಿ ವಿರೋಧ ಪಕ್ಷದ ಸಂಸದರು ಡಿಸೆಂಬರ್ 10ರಂದು ರಾಜ್ಯಸಭಾ ಸ್ಪೀಕರ್ ಧನ್ಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು. ಸ್ಪೀಕರ್ ಪಕ್ಷಪಾತೀಯವಾಗಿದ್ದಾರೆ ಎಂದು ಆರೋಪಿಸಿದ್ದರು. ಆ ಬಳಿಕ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News