ಸೂರತ್ : ತೊಗಾಡಿಯಾ ಸೋದರ, ಇನ್ನಿಬ್ಬರನ್ನು ಇರಿದು ಕೊಲೆ

Update: 2016-05-15 00:18 GMT

ಸೂರತ್, ಮೇ 15: ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಸೋದರ ಸಂಬಂಧಿ ಭರತ್ ತೊಗಾಡಿಯಾ ಹಾಗೂ ಇನ್ನೂ ಇಬ್ಬರನ್ನು ಶನಿವಾರ ಅಪರಿಚಿತರು ಇರಿದು ಕೊಲೆ ಮಾಡಿರುವ ಘಟನೆ ಸೂರತ್ ನಲ್ಲಿ ನಡೆದಿದೆ.

ಭರತ್ ತೊಗಾಡಿಯಾ ಸೂರತ್ ಮುನಿಸಿಪಲ್ ಕಾರ್ಪೊರೇಷನ್ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಪ್ರಫುಲ್ ತೊಗಾಡಿಯಾ ಅವರ ನೇರ ಸೋದರ.

ಬಾಬು ಹಿರಾನಿ ಹಾಗೂ ಅಶೋಕ್ ಪಟೇಲ್ ಕೊಲೆಯಾದ ಇನ್ನಿಬ್ಬರು. ಮಹೇಶ್ ರಡಾಡಿಯ ಎಂಬವರು ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದಾರೆ.ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News