ಮಗಳು ತನ್ನ ತಾಯಿಯ ವಿರುದ್ಧ ಕೊಟ್ಟ ದೂರು ಎಷ್ಟು ವಿಚಿತ್ರ!

Update: 2016-05-15 08:40 GMT

ಝಾನ್ಸಿ, ಮೇ 15: ಮನೆಯಿಂದ ತಪ್ಪಿಸಿಕೊಂಡು ಬಂದ ಅಪ್ರಾಪ್ತವಯಸ್ಸಿನ ಬಾಲಕಿಯೊಬ್ಬಳು ತನ್ನತಾಯಿಯ ವಿರುದ್ಧ ದೂರು ನೀಡಿದ ಘಟನೆ ಉತ್ತರ ಪ್ರದೇಶದ ಝಾನ್ಸಿಯಿಂದ ವರದಿಯಾಗಿದೆ. ಹದಿಮೂರು ವರ್ಷದ ಬಾಲಕಿ ತನ್ನ ಮಲ ತಂದೆ ಕಿರುಕುಳದಿಂದ ಮನೆಯಿಂದ ತಪ್ಪಿಸಿಕೊಂಡು ಬಂದು ಪೊಲೀಸರ ಮುಂದೆ ತನ್ನ ತಾಯಿ ತನ್ನಶೋಕಿಯನ್ನು ಪೂರೈಸಲಿಕ್ಕಾಗಿ ದಿನಕ್ಕೊಂದು ಹೊಸ ಹೊಸ ಪತಿಯಂದಿರನ್ನು ಬಲೆಗೆ ಹಾಕುತ್ತಿದ್ದಾರೆ ಎಂದು ದೂರಿಕೊಂಡಿದ್ದಾಳೆ. ಅವಳು ಪೊಲೀಸರಿಗೆ ತಿಳಿಸಿರುವ ಪ್ರಕಾರ ಅವಳ ತಾಯಿ ಒಬ್ಬನಲ್ಲಿ ಬೇಸರ ಮೂಡಿದಾಗ ಇನ್ನೊಬ್ಬನನ್ನು ಹುಡುಕುತ್ತಿದ್ದಾಳೆ. ಆದರೆ ಝಾನ್ಸಿಯ ಸದರ್ ಠಾಣೆ ವ್ಯಾಪ್ತಿಯ ಈ ಮಹಿಳೆ ಎಪ್ರಿಲ್ 20ರಂದು ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮಹಿಳೆಯ ದೂರಿನಂತೆ ಕ್ರಮಕೈಗೊಂಡು ಬಾಲಕಿಯನ್ನು ಅಜ್ಜನ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ. ಪೊಲೀಸರು ಬಾಲಕಿ ತಿಳಿಸಿದ ವಿಷಯವನ್ನು ಕೇಳಿ ಗರಬಡಿದವರಂತಾಗಿದ್ದರು. ಅವಳು ತನ್ನನ್ನು ಅಪಹರಿಸಲಾಗಿಲ್ಲ ಬದಲಾಗಿ ತಾನೇ ಅಜ್ಜನ ಮನೆಗೆ ಓಡಿಹೋಗಿದ್ದೆ ಎಂದು ತಿಳಿಸಿದ್ದಾಳೆ. ಬಾಲಕಿಯ ತಾಯಿ ಕೆಲವು ವರ್ಷಗಳ ಮೊದಲು ತನ್ನ ಮೊದಲ ಪತಿಯನ್ನು ತೊರೆದಿದ್ದಳು.

ಈ ಮಹಿಳೆ ಅಪಹರಣದ ನಾಟಕವಾಡಿ ತನ್ನ ಮೊದಲ ಪತಿ ನರೇಂದ್ರ ಎಂಬಾತನಿಂದ ಪ್ರಕರಣದಿಂದ ಪಾರಾಗಲು ಒಂದು ಕೋಟಿ ರೂ. ಬೇಡಿಕೆ ಇಟ್ಟಿದ್ದಳೆನ್ನಲಾಗಿದೆ. ಪೊಲೀಸರು ಅಪಹರಣ ಪ್ರಕರಣದಲ್ಲಿ ನರೇಂದ್ರನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು. ಇನ್ನೊಂದೆಡೆ ಬಾಲಕಿ ಅವಳ ತಾಯಿ ನಾಲ್ಕು ಮದುವೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅವಳ ಮಲತಂದೆ ಅವಳಿಗೆ ಹೊಡೆದು ಶಾರೀರಿಕ ಕಿರುಕುಳಕ್ಕೆ ಮುಂದಾಗಿದ್ದ ಎಂದೂ ಬಾಲಕಿ ತಿಳಿಸಿದ್ದಾಳೆ.ಅದ್ದರಿಂದ ಮೊದಲು ಅವಳು ತನ್ನ ತಂದೆ ಮನೆಗೆ ಹೋಗಿದ್ದಳು. ಅಲ್ಲಿ ಅವಳಿರುವುದು ನೋಡಿದ ತಾಯಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು.

ಅವಳ ಮಲತಂದೆ ಹೊಡೆಯುವುದನ್ನು ಕಂಡು ತಾಯಿ ಕೇವಲ ತಮಾಷೆ ನೋಡುತ್ತಾ ನಿಲ್ಲುತ್ತಿದ್ದಳೆಂದು ಪೊಲೀಸರಿಗೆ ಬಾಲಕಿ ವಿವರಿಸಿದ್ದಾಳೆ. ಅವಳಿಂದ ಮನೆಯ ಎಲ್ಲಾ ಕೆಲಸ ಮಾಡಿಸಲಾಗುತ್ತಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾಳೆ ಸದರ್ ಬಜಾರ್ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಗೌತಮ್‌ರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ತಿಳಿಸಿದ್ದಾರೆ. ಮಹಿಳೆ ಮತ್ತು ಅವಳ ನಾಲ್ಕನೇ ಗಂಡ ಪರಾರಿಯಾಗಿದ್ದಾರೆ. ಪೊಲೀಸರು ಅವರ ಪತ್ತೆಗಾಗಿ ಕ್ರಮಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News