ಅಸ್ಸಾಮ್‌ನಲ್ಲಿ ನಾಲ್ಕನೆ ಬಾರಿಯೂ ನಾನೇ ಮುಖ್ಯಮಂತ್ರಿ!: ತರುಣ್ ಗೊಗೊಯ್

Update: 2016-05-15 08:48 GMT

ಹೊಸದಿಲ್ಲಿ, ಮೇ 15: ಅಸ್ಸಾಮ್ ಮುಖ್ಯಮಂತ್ರಿ ತರುಣ್ ಗೊಗೊಯ್ ಈಗಾಗಲೇ ಕೊನೆಗೊಂಡಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮೊದಲೇ ನಿರಂತರ ನಾಲ್ಕನೆ ಬಾರಿಯೂ ತಾನೇ ಮುಖ್ಯಮಂತ್ರಿಯಾಗಿ ಸರಕಾರ ರಚಿಸುವೆ ಎಂದು ವಿಶ್ವಾಸ ಪ್ರಕಟಿಸಿದ್ದಾರೆ. ಗೋಗೊಯ್ ತನ್ನ ಪುಸ್ತಕ ಟರ್ನ್‌ಅರೌಂಡ್:ಲೀಡಿಂಗ್ ಅಸ್ಸಾಮ್ ಫ್ರಂಟ್ ನ ಫ್ರಂಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಮಾತಾಡಿ ಕಾಂಗ್ರೆಸ್ ಬಹುಮತ ನಿಶ್ಚಿತ 64 ಶಾಸಕರ ಜಾದೂ ಸಂಖ್ಯೆಯನ್ನು ದಾಟಲಿದ್ದು ಸರಕಾರ ರಚಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಅವರು ಆಲ್‌ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ನಾಯಕ ಬದ್ರುದ್ದೀನ್ ಅಜ್ಮಲ್ ಹಾಗೂ ಅಸ್ಸಾಮ್ ಗಣ ಪರಿಷತ್ ನಾಯಕ ಹಾಗೂ ರಾಜ್ಯ ಮಾಜಿ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ್ ಮಹಂತಾರ ಮೂರನೆ ರಂಗ ಸರಕಾರ ರಚಿಸುವ ಸಾಧ್ಯತೆಗಳನ್ನು ಅಲ್ಲಗಳೆದಿದ್ದಾರೆ. ಅಸ್ಸಾಮ್‌ನಲ್ಲಿ ಒಟ್ಟು 126 ಶಾಸಕ ಸ್ಥಾನಗಳಿದ್ದು ಕಳೆದ ತಿಂಗಳು ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News