ನೋಡಿ, ಇದೇ ಸರಕಾರಿ ಶಾಲೆ!

Update: 2016-05-15 09:43 GMT

ಸತೌನ್, ಮೇ 15: ಹಿಮಾಚಲ ಪ್ರದೇಶದ ಒಂದು ಸರಕಾರಿಶಾಲೆ ಇದು.ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತೇವೆನ್ನುವವರ ಬಣ್ಣ ಬಯಲಾಗುವುದಕ್ಕಿದೊಂದು ಉದಾಹರಣೆಯಾಗಿದೆ. ಹಿಮಾಚಲಪ್ರದೇಶದ ಪಾವಂಟಾ(ಸಿರ್‌ಮೌರ್) ದಲ್ಲಿ ಈ ಶಾಲೆ ಇದೆ. 1996ರಿಂದ ಒಂದು ಜೋಪಡಿಯಲ್ಲಿ ಪ್ರಾಥಮಿಕ ಶಾಲೆ ನಡೆಯುತ್ತಿದೆ. ಇದೇ ಶಾಲೆಗೆ ಅಪ್‌ಗ್ರೇಡ್‌ಕೂಡಾ ನೀಡಲಾಗಿದೆ. ಆದ್ದರಿಂದ ಇದೇ ಗುಡಿಸಲಿನಲ್ಲಿ ಎಂಟನೆಯ ತರಗತಿವರೆಗೆ ಶಾಲೆನಡೆಸಬೇಕಾಗಿ ಕಷ್ಟಪಡಬೇಕಾಗಿದೆ. ಅಥವಾ ಶಿಕ್ಷಕರು ಇನ್ನೊಂದು ಗುಡಿಸಲನ್ನು ಹುಡುಕಬೇಕಾಗಿದೆ. ಇಪ್ಪತ್ತು ವರ್ಷಗಳಿಂದ ಇಲ್ಲಿ ಶಾಲೆ ಇದ್ದರೂ ಸರಕಾರ ಶಾಲಾ ಕಟ್ಟಡ ಒದಗಿಸಿಲ್ಲ. ಶಾಲೆಗಾಗಿ ಈವರೆಗೂ ಒಂದು ಸರಿಯಾದ ಸ್ಥಳವನ್ನೂ ಗುರುತಿಸಲಾಗಿಲ್ಲ. ಈಗಿರುವ ಈ ಶಾಲೆ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿದೆ. ಈವರೆಗೂ ಇಲ್ಲಿ ಐದನೆತರಗತಿವರೆಗಿತ್ತು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News