ಜರ್ಮನಿಯಲ್ಲೊಬ್ಬ ಶ್..ಶ್.. ಶಾರುಖ್ ಖಾನ್ ಫ್ಯಾನ್!

Update: 2016-05-15 12:12 GMT

ಮುಂಬೈ: ರೇನ್ ಲಾಜೆರ್ ಒಂಬತ್ತು ವರ್ಷದವನಿದ್ದಾಗ ಆತನ ಬದುಕು ವಿಚಿತ್ರ ತಿರುವು ಪಡೆಯಿತು. ಆತನ ತಾಯಿ ’’ಕುಚ್ ಕುಚ್ ಹೋತಾ ಹೈ’’ ಡಿವಿಡಿ ತಂದರು. ಇದರಿಂದ ಆಕರ್ಷಿತರಾಗಿ ಬಳಿಕ ಶಾರುಖ್ ಖಾನ್ ಅವರ ಎಲ್ಲ ಚಿತ್ರಗಳ ಡಿವಿಡಿ ನಿರ್ಮಿಸಿದರು. ಲಾಜೆರ್ಸ್‌ ವಾಸವಾಗಿದ್ದುದು ಮರ್ಸಿಡೆಸ್ ಹಾಗೂ ಪೋರ್ಚ್ಸ್ ಕೇಂದ್ರ ಕಚೇರಿ ಸ್ಟುಟ್‌ಗರ್ಟ್‌ನಲ್ಲಿ. ಇಲ್ಲಿ ಬಾಲಿವುಡ್ ಸಿನಿಮಾ ಪಡೆಯುವುದಕ್ಕಿಂತ ಕಾರು ಖರೀದಿ ಮಾಡುವುದು ಸುಲಭ. 11 ವರ್ಷದವನಿದ್ದಾಗ ಲಾಜೆರ್, ತನ್ನ ತಂದೆ- ತಾಯಿ ನಿರ್ಮಿಸಿದ ಮೊದಲ ಫ್ಯಾನ್ ವಿಡಿಯೊದಲ್ಲಿ ನಟಿಸಿದ. ಈ ಗುಂಗುರು ಕೂದಲ, ಗಾತ್ರಕ್ಕಿಂತ ದೊಡ್ಡ ಶರ್ಟ್ ಧರಿಸಿದ್ದ ಈ ಬಾಲಕ ವಿಡಿಯೊ ದೃಶ್ಯಾವಳಿಯಲ್ಲಿ ಖಾನ್ ಡ್ರಡ್ ಇ ಡಿಸ್ಕೊ ಹೆಜ್ಜೆಗೆ ಅನುಗುಣವಾಗಿ ಹೆಜ್ಜೆ ಹಾಕಿದ್ದ. ವರ್ಷದ ಬಳಿಕ ಆತನ ತಾಯಿ ಕ್ಯಾನ್ಸರ್‌ಗೆ ಬಲಿಯಾದರು. ತಂದೆಯೇ ಲಾಜೆರ್ ಹಾಗೂ ತಮ್ಮನನ್ನು ಬೆಳೆಸಿದರು.

ರೇನ್‌ಗೆ ಇದೀಗ 19 ವರ್ಷ. ಮರ್ಸಿಡೆಸ್ ಬೆಂಜ್ ಕಂಪನಿಯಲ್ಲಿ ಸಹಾಯಕ ಕೈಗಾರಿಕಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾರೆ, ಸೋಮವಾರದಿಂದ ಶುಕ್ರವಾರದ ವರೆಗೆ ಇದೇ ವೃತ್ತಿ. ವಾರಾಂತ್ಯದಲ್ಲಿ, ಹಿಂದಿ ಚಿತ್ರಗಳಲ್ಲಿ ಶಾರುಖ್ ಖಾನ್ ರೀತಿಯಲ್ಲೇ ನಟಿಸುವ ವಿಡಿಯೊ ತಯಾರಿಸುತ್ತಾರೆ. 2014ರಿಂದೀಚೆಗೆ ಮೂರು ವಿಡಿಯೊ ಮಾಡಿದ್ದಾರೆ. ಮತ್ತೆರಡು ವಿಡಿಯೊ ತಯಾರಿ ಸಿದ್ಧತೆಯಲ್ಲಿದ್ದಾರೆ. ಪ್ರತಿ ವಿಡಿಯೊಗಳು ಮಾರುಕಟ್ಟೆಗೆ ಬಂದಂತೆಲ್ಲ ಇವರ ಜನಪ್ರಿಯತೆಯೂ ಉತ್ತುಂಗಕ್ಕೇರುತ್ತಿದ್ದಾರೆ. ಖಾನ್ ಅವರ ಇತ್ತೀಚಿನ ಫ್ಯಾನ್ ಚಿತ್ರದ ಪ್ರಚಾರ ವಿಡಿಯೊದಲ್ಲೂ ಇವರು ನಟಿಸಿದ್ದಾರೆ. ಇಷ್ಕ್ ಎಂಬ ಜರ್ಮನ್ ನಿಯತಕಾಲಿಕದಲ್ಲಿ ಇವರ ಸಂದರ್ಶನವೂ ಪ್ರಕಟವಾಗಿದೆ.

"ನೆಚ್ಚಿನ ನಟ ಶಾರುಖ್ ಅವರು ನನ್ನ ಮನಸ್ಸಿಗೆ ಮುದ ನೀಡುತ್ತಾರೆ. ಅವರ ಪ್ರೀತಿಗಾಗಿ ನಾನು ವಿಡಿಯೊ ತಯಾರಿಸುತ್ತೇನೆ" ಎಂದು ರೇನ್ ಹೇಳುತ್ತಾರೆ. ಫ್ಯಾನ್ ಚಿತ್ರವನ್ನು ಇಷ್ಟಪಟ್ಟಿದ್ದರೂ, ಗೌರವ್ ಪಾತ್ರದ ಜತೆ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಅವರಂತೆ ನಾನಾಗಲು ಸಾಧ್ಯವೇ ಇಲ್ಲ. ಶಾರುಕ್ ಅವರಿಗೆ ಅವರದ್ದೇ ಜೀವನವಿದೆ. ನನಗೆ ನನ್ನದೇ ಜೀವನ" ಎಂದು ಹೇಳುತ್ತಾರೆ.

ಸ್ಟಟ್‌ಗರ್ಟ್‌ನಲ್ಲಿ ಅವರನ್ನು ಮೊದಲ ಬಾರಿ ನೋಡಿದಾಗ ಆ ಪ್ರದರ್ಶನದಲ್ಲಿ ಖಾನ್ ಅವರಂತೆಯೇ ಕೈಗಳನ್ನು ನಿಧಾನವಾಗಿ ಮುಂದಕ್ಕೆ ಚಾಚಿದಾಗ ಶಾರೂಕ್ ನಟನೆ ಬಗ್ಗೆ ಅರಿವು ಇರುವ ಪ್ರೇಕ್ಷಕರಿಂದ ಪ್ರಚಂಡ ಕರತಾಡನ ಕೇಳಿಬಂತು. ಖಾನ್ ಅವರ ಈ ವಿಶಿಷ್ಟ ಭಂಗಿ ಇಡೀ ವಿಶ್ವವನ್ನೇ ತಬ್ಬಿಕೊಳ್ಳುವಂಥ ಸಂದೇಶವನ್ನು ಅಭಿಮಾನಿಗಳಿಗೆ ನೀಡುವಂಥದ್ದು.

ಅದೇ ದಿನ ಬಿಡುಗಡೆಯಾದ ದಿಲ್‌ವಾಲೆಯ ಡಿವಿಡಿ ಪ್ರತಿಯನ್ನೂ ರೇನ್ ತಂದೆ ಹೊಂದಿದ್ದು, ಜರ್ಮನಿಯಲ್ಲಿ ಇದರ ಚಿತ್ರೀಕರಣಕ್ಕೆ ಸೂಕ್ತ ಸ್ಥಳ ಹುಡುಕಾಟದಲ್ಲಿದ್ದಾರೆ. ವರ್ಷಾಂತ್ಯಕ್ಕೆ ತಂದೆ- ಮಗ ಭಾರತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ರೇನ್‌ಗೆ ಬಾಲಿವುಡ್ ನಟನಾಗುವ ಆಸೆ. ತನ್ನ ನೆಚ್ಚಿನ ನಾಯಕನನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದರೆ, ಅವರ ಎದುರು ಮಾತೇ ಹೊರಡದು. ನನ್ನನ್ನು ನಾನೇ ಎಚ್ಚರಿಸಿಕೊಂಡು ಇದು ವಾಸ್ತವವೇ ಎಂದು ಅಚ್ಚರಿಪಡುತ್ತೇನೆ ಎಂದು ಅಭಿಮಾನದಿಂದ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News