ಭಾರತದಿಂದ ಶಬ್ದಾತೀತ ವೇಗದ ಇಂಟರ್‌ಸೆಪ್ಟರ್ ಕ್ಷಿಪಣಿ ಯಶಸ್ವಿ ಪರೀಕ್ಷೆ

Update: 2016-05-15 18:53 GMT

ಬಾಲ್ಸೂರು, ಮೇ 15: ಭಾರತವು ತನ್ನ ಸ್ವದೇಶಿ ನಿರ್ಮಿತ ಶಬ್ದಾತೀತ ವೇಗದ ಅಡ್ಡಹಾಯ್ಕೆ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿವೆ. ಅದು ಒಳ ಬರುವ ಯಾವುದೇ ಶತ್ರು ಕ್ಷಿಪಣಿಯನ್ನು ಧ್ವಂಸಗೊಳಿಸಲು ಸಮರ್ಥವಾಗಿದೆ. ಒಡಿಶಾ ತೀರದಾಚೆಯ ಪರೀಕ್ಷಾ ವಲಯದಲ್ಲಿ ಈ ಕ್ಷಿಪಣಿಯ ಯಶಸ್ವೀ ಪರೀಕ್ಷೆಯಿಂದ ಭಾರತ ಸಂಪೂರ್ಣ ಸನ್ನದ್ಧ ಬಹು-ಹಂತಗಳ ಪ್ರಕ್ಷೇಪಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಪಡೆಯುವ ತನ್ನ ಯತ್ನದಲ್ಲಿ ಮುನ್ನಡೆ ಸಾಧಿಸಿದಂತಾಗಿದೆ.
ಹಾರುವಿಕೆಯಲ್ಲಿ ಇಂಟರ್‌ಸೆಪ್ಟರ್ ಕ್ಷಿಪಣಿಯ ವಿವಿಧ ಸಾಮರ್ಥ್ಯವನ್ನು ವೌಲ್ಯಮಾಪನ ನಡೆಸಲು ಈ ಪರೀಕ್ಷೆ ನಡೆಸಿದ್ದು, ಅದು ಯಶಸ್ವಿಯಾಗಿದೆಯೆಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.
ಬಂಗಾಳ ಕೊಲ್ಲಿಯಲ್ಲಿ ನಿಲ್ಲಿಸಲಾಗಿದ್ದ ಹಡಗೊಂದರಿಂದ ಪೃಥ್ವಿ ಕ್ಷಿಪಣಿಯ ಜಲಸೇನಾ ಆವೃತಿತಿಯನ್ನು ಶುತ್ರು ಕ್ಷಿಪಣಿಯಾಗಿ ಹಾರಿಸಲಾಗಿತುತಿ. ಅಡ್ಡಹಾಯ್ಕೆ ಕ್ಷಿಪಣಿಯು ಗುರಿಯನ್ನು ಯಶಸ್ವಿಯಾಗಿ ಭೇದಿಸಿತೆಂದು ಅದು ಹೇಳಿದೆ.
ಅಡ್ಡ ಹಾಯ್ಕೆ ಕ್ಷಿಪಣಿಯು 7.5 ಮೀ. ಉದ್ದದ ಏಕ ಹಂತದ ಘನ ರಾಕೆಟ್ ಇಂಧನ ಚಾಲಿತ ನಿರ್ದೇಶಿತ ಅಸ್ತ್ರವಾಗಿದ್ದು, ನಾವಿಕ ವ್ಯವಸ್ಥೆ, ಹೈಟೆಕ್ ಕಂಪ್ಯೂಟರ್ ಹಾಗೂ ಇಲೆಕ್ಟ್ರೊ ಮೆಕ್ಯಾನಿಕ್ ಆಕ್ಟಿವೇಟರ್‌ನಿಂದ ಸಜಾಗಿದೆಯೆಂದು ಡಿಆರ್‌ಡಿಒ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News