12ರ ಹರೆಯದ ಬಾಲಕಿಯ ಅತ್ಯಾಚಾರ ಯತ್ನ : ಆರೋಪಿ ಪೊಲೀಸ್ ಬಲೆಗೆ

Update: 2016-05-16 09:20 GMT

ಚಂಡಿಗಡ, ಮೇ 16: ಹರಿಯಾಣದಲ್ಲಿ 12 ವರ್ಷ ವಯಸ್ಸಿನ ಪುಟ್ಟ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯಲ್ಲಿ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.ಕಳೆದ ದಿವಸ ಬಗಾನ್‌ವಾಲ ರಸ್ತೆ ಸಮೀಪ ಜಾನುವಾರುಗಳನ್ನು ಮೇಯಿಸಲು ಹೋದ ಬಾಲಕಿಯನ್ನು ಈತ ಬಲಾತ್ಕರಿಸಲು ಪ್ರಯತ್ನಿಸಿದಾಗ ಬಾಲಕಿಯ ಕೂಗನ್ನು ಕೇಳಿಸಿಕೊಂಡ ಸ್ಥಳೀಯರು ಅತ್ತ ಧಾವಿಸಿದಾಗ ಆತ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಂದೆ ನೀಡಿದ ದೂರಿನಾಧಾರದಲ್ಲಿ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಹತ್ತೊಂಬತ್ತು ವರ್ಷದ ಯುವತಿಯನ್ನು ಅಪಹರಿಸಲು ಯತ್ನಿಸಿದ ಒಂದು ಕುಟುಂಬದ ಐದು ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News