ತಮಿಳ್ನಾಡು: ಬಿಜೆಪಿಯಲ್ಲಿ ವಿಶ್ವಾಶ ಇರಿಸಬಹುದೆಂದು ಮುಸ್ಲಿಮರಿಗೆ ಕರೆ ನೀಡುತ್ತಿರುವ ಅಬ್ದುಲ್ ಕಲಾಂ ಮೊಮ್ಮಗ!

Update: 2016-05-16 11:07 GMT

ತಮಿಳ್ನಾಡು, ಮೇ 16: ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್‌ರ ಸಂಬಂಧಿ ಹಾಗೂ ಕಲಾಂರ ಅಣ್ಣನ ಮೊಮ್ಮಗ ಶೇಖ್ ಸಲೀಮ್ ಕಾಂಗ್ರೆಸ್‌ನ ಬದ್ಧ ವಿರೋಧಿ ಬಿಜೆಪಿಗಾಗಿ ತಮಿಳ್ನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಅವರು ಕಳೆದ ವರ್ಷ ಬಿಜೆಪಿಯನ್ನು ಸೇರಿದ್ದು ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷವಲ್ಲ ಅದರಲ್ಲಿಮುಸ್ಲಿಮರು ಭರವಸೆ ಇಡಬಹುದಾಗಿದೆ ಎಂದು ತಮಿಳ್ನಾಡಿನ ಮುಸ್ಲಿಮರಿಗೆ ಅವರು ಕರೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಶೇಖ್ ಸಲೀಂ ಪ್ರಕಾರ ಅವರು 2014ರಲ್ಲಿ ಕಲಾಮ್‌ರಿಗೆ ತನಗೆ ಬಿಜೆಪಿಯಲ್ಲಿ ಆಸಕ್ತಿಯಿದೆ ಎಂದು ತಿಳಿಸಿದ್ದರು. ಕಲಾಂ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ನೀನು ಯಾವ ಪಕ್ಷವನ್ನು ಬೇಕಾದರೂ ಸೇರು ಆದರೆ ರಾಮಶ್ವೇರದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿ ಹೆಸರು ಗಳಿಸು ಎಂದು ಕಲಾಮ್ ತನಗೆ ಹೇಳಿದ್ದಾರೆ.

ಸಲೀಂ ತಮಿಳ್ನಾಡಿನ ಬಿಜೆಪಿ ಅಧ್ಯಕ್ಷ ಎಚ್ ರಾಜಾರೊಂದಿಗೆ ಹಲವು ಕಡೆ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಮುಸ್ಲಿಮರು ಕೂಡಾ ಭ್ರಷ್ಟಾಚಾರ ಮುಕ್ತ ಭಾರತದ ಕುರಿತು ಚಿಂತಿಸಬೇಕಾಗಿದೆ. ಇದನ್ನು ಬಿಜೆಪಿ ಸಾಧಿಸಿ ತೋರಿಸಲಿದೆ ಎಂದು ಅವರು ಪ್ರಚಾರದಲ್ಲಿ ಕರೆ ನೀಡಿದ್ದಾರೆ.

ಕಲಾಂರ ಹೆಸರನ್ನು ಬಳಸಿ ರಾಜಕೀಯ ಲಾಭವೆತ್ತಲುಪ್ರಯತ್ನಿಸುವ ಜನರ ಕುರಿತು ಸಲೀಂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಲಾಮ್‌ರ ಸಲಹೆಗಾರ ಪುನರಾಜ್ ಕಲಾಂ ಮೃತರಾದ ಬಳಿಕ ಕಲಾಂರ ಹೆಸರಲ್ಲಿ ಒಂದು ಪಕ್ಷವನ್ನು ಕಟ್ಟಲು ಬಯಸಿದ್ದರಂತೆ ಅದಕ್ಕೆ ತಾನು ಅವಕಾಶ ನೀಡಲಿಲ್ಲ ಎಂದು ಸಲೀಂ ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಕಲಾಂರ ಹೆಸರಿನಲ್ಲಿ ಪಕ್ಷ ರಚಿಸಲು ಯತ್ನಿಸಿದ್ದು ಚುನಾವಣೆ ಆಯೋಗ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ. ನಂತರ ಈ ಜನರು ಮಹಾತ್ಮಾಗಾಂಧಿಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸಲೀಂ ದೂರಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News